ಬೆಂಗಳೂರು: ಎಲ್ಲರಿಗೂ ವಿಜಯೇಂದ್ರನೇ (B.Y.Vijayendra) ನಾಯಕ. ಸಣ್ಣವರು ದೊಡ್ಡವರು ಎಂಬ ಪ್ರಶ್ನೆ ಬರಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಾದಯಾತ್ರೆಗೆ ಪಕ್ಷದ ತೀರ್ಮಾನ ಅಂತಾ ಹೇಳಿಕೊಳ್ತಿರಬೇಕು. ಪಕ್ಷ ಇನ್ನೂ ಅಧಿಕೃತವಾಗಿ ಅನುಮತಿ ಕೊಟ್ಟಿಲ್ಲ. ಗೋಲ್ಡ್ ಪಿಂಚ್‌ನಲ್ಲಿ ಒಂದು ಸಭೆ ಆಗಿತ್ತು. ಪಾದಯಾತ್ರೆ ಅಲ್ಲಿ ಮಾಡಿ ಅಂತಾ ಶ್ರೀರಾಮುಲು ಹೇಳಿದ್ರು. ಆದರೆ ವಿಜಯೇಂದ್ರ ಪಾದಯಾತ್ರೆಗೆ ಯತ್ನಾಳ್ ವಿರೋಧಿಸಿಲ್ಲ ಅಂದ್ರು. ಅಧ್ಯಕ್ಷರನ್ನ ಬಿಟ್ಟು ಯಾರು ಏನೂ ಮಾಡಿಲ್ಲ. ರಮೇಶ್ ಜಾರಕಿಹೊಳಿ ಸಣ್ಣಪುಟ್ಟ ಮೀಟಿಂಗ್‌ಗೆ ಬಂದಿಲ್ಲ ಅಂತೇಳಿದ್ರು ಎಂದರು. ಇದನ್ನೂ ಓದಿ: ನನಗೆ ಕಾರು, ಗನ್ ಮ್ಯಾನ್ ಕೊಟ್ಟಿಲ್ಲ, ಏನಾದ್ರೂ ಆದ್ರೆ ಸರ್ಕಾರವೇ ಹೊಣೆ: ಛಲವಾದಿ ನಾರಾಯಣಸ್ವಾಮಿ
Advertisement
Advertisement
ಇದೇ ವೇಳೆ ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಆಗಿ ಸಿ.ಪಿ.ಯೋಗೇಶ್ವರ್ ಸ್ಪರ್ಧೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ವೈಯುಕ್ತಿಕ ಅಭಿಪ್ರಾಯಗಳಿಗೆ ನಾನು ಮನ್ನಣೆ ಕೊಡಲ್ಲ. ಅದು ಪಕ್ಷದ ನಿರ್ಧಾರ ಅಲ್ಲ. ರಾಜ್ಯ ಹಾಗೂ ದೇಶದ ಹಿತದೃಷ್ಟಿಯಿಂದ ಕೆಲವೊಂದು ನಿರ್ಧಾರ ಅನಿವಾರ್ಯವಾಗುತ್ತೆ. ಹೀಗಾಗಿ ಮೈತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ. ನಾವು ಜೆಡಿಎಸ್‌ಗೆ ಶರಣಾಗಿಲ್ಲ ಎಂದು ಸ್ಪಷ್ಟಪಡಿಸಿದರು.