ಸಿನಿಲೋಕದ ಸೆನ್ಸೇಷನಲ್ ಜೋಡಿ ವಿಜಯ್ ದೇವರಕೊಂಡ (Vijay Deverakonda) ಹಾಗೂ ರಶ್ಮಿಕಾ ಮಂದಣ್ಣ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಅತಿಥಿಗಳಿಗೆ ನೀಡಲಾದ ಅವರ ವಿವಾಹ ಕಾರ್ಡ್ ಈಗ ಸಖತ್ ವೈರಲ್ ಆಗಿದೆ.
ಇದೇ ಫೆ.26 ರಂದು ವಿಜಯ್ – ರಶ್ಮಿಕಾ ಮಂದಣ್ಣ (Rashmika Mandanna) ವಿವಾಹವಾಗುತ್ತಿದ್ದು, ಮಾರ್ಚ್ 4 ರಂದು ಬಂಜಾರ ಹಿಲ್ಸ್‌ನಲ್ಲಿರುವ ತಾಜ್ ಕೃಷ್ಣಾ (Taj Krishna) ಪ್ಯಾಲೆಸ್‌ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದ ಗುರು ಹಿರಿಯರ ಸಮ್ಮುಖದಲ್ಲಿ ವಿಜಯ್ – ರಶ್ಮಿಕಾ ವಿವಾಹವಾಗಲಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ.

ಕಳೆದ ಕೆಲ ವರ್ಷಗಳಿಂದಲೂ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣರ ಮದುವೆ (VR Wedding) ಬಗ್ಗೆ ಗಾಸಿಪ್‌ಗಳು ಜೋರಾಗಿಯೇ ಸದ್ದು ಮಾಡುತ್ತಿದ್ದವು. ಇಬ್ಬರು ಒಟ್ಟಿಗೆ ಸುತ್ತಾಡುತ್ತಿದ್ದರೂ ಒಬ್ಬರಿಗೊಬ್ಬರು ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಬಳಿಕ ಫೆಬ್ರವರಿ 2 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ ಎಂದೆಲ್ಲಾ ಸುದ್ದಿ ಹರಿದಾಡುತ್ತಿತ್ತು. ಸದ್ಯ ವೆಡ್ಡಿಂಗ್ ಕಾರ್ಡ್ ವೈರಲ್ ಆಗಿದ್ದು, ವದಂತಿಗಳಿಗೆ ತೆರೆ ಬಿದ್ದಿದೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಮದುವೆಗೆ ಅತಿಥಿಗಳನ್ನ ಆಹ್ವಾನಿಸುತ್ತಿದ್ದಾರೆ. ಈ ರೀತಿ ಆಹ್ವಾನ ನೀಡಿದವರ ಪೈಕಿ ಒಬ್ಬರು ಮದುವೆ ಆಮಂತ್ರಣ ಪತ್ರಿಕೆಯನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿವಾಹ ಆಮಂತ್ರಣ ಬಾಕ್ಸ್ ನಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಎಂದು ಬರೆದಿದೆ. ಆಮಂತ್ರಣ ಪತ್ರದಲ್ಲಿ ಮದುವೆ ಫೆಬ್ರವರಿ 26 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ. ಉದಯಪುರ ಪ್ಯಾಲೆಸ್‌ನಲ್ಲಿ ಮದ್ವೆ ನಡೆಯುತ್ತಿದೆ ಎನ್ನಲಾದ್ರೂ ಪತ್ರಿಕೆಯಲ್ಲಿ ಮದುವೆಯ ಸ್ಥಳ ಬಹಿರಂಗಪಡಿಸಿಲ್ಲ.

ಈ ಪುಟ್ಟ ಸಮಾರಂಭದಲ್ಲಿ ಕುಟುಂಬ ಸದಸ್ಯರು, ಅತ್ಯಾಪ್ತರು, ಉದ್ಯಮ ಸ್ನೇಹಿತರು ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 4 ರಂದು ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ತಾಜ್ ಕೃಷ್ಣಾ ಪ್ಯಾಲೆಸ್‌ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ ಅನ್ನೋದು ವಿವಾಹ ಪತ್ರಿಕೆಯಲ್ಲಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ 2018 ರಲ್ಲಿ ʻಗೀತ ಗೋವಿಂದಂʼ ನಂತರ ʻಡಿಯರ್ ಕಾಮ್ರೇಡ್ʼ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ತೆರೆ ಮೇಲಿನ ಈ ಜೋಡಿಯ ಕೆಮಿಸ್ಟ್ರಿ ಸಖತ್ ಹಿಟ್ ಆಗಿತ್ತು. ಅಂದಿನಿಂದಲೂ ಇವರಿಬ್ಬರ ಡೇಟಿಂಗ್ ಸುದ್ದಿ ಹಬ್ಬಿತ್ತು.

