ಹೈದರಾಬಾದ್: ಮದ್ಯದ ಅಮಲಿನಲ್ಲಿದ್ದ ಮಗನನ್ನು 55 ವರ್ಷದ ಮಹಿಳೆ ಕೊಡಲಿಯಿಂದ ಕೊಚ್ಚಿ ಕೊಂದಿರುವ ಘಟನೆ ವಿಜಯವಾಡದಲ್ಲಿ ನಡೆದಿದೆ.
ಅಪ್ಪಲ ಬಾಲ ಕೋಟಾಯ್ಯ (35) ಮೃತ ದುರ್ದೈವಿಯಾಗಿದ್ದು, ಈತ ಟ್ರಕ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಆರೋಪಿಯನ್ನು ಅಪ್ಪಲ ಚಿಟ್ಟೆಮಾ ಎಂದು ಗುರುತಿಸಲಾಗಿದೆ.
ಆರು ವರ್ಷಗಳ ಹಿಂದೆ ಅಪ್ಪಲ ಬಾಲ ಕೋಟಾಯ್ಯ, ಕಂಚಿಕಚೆರ್ಲಾದ ಸಿರಿಶಾರನ್ನು ಮದುವೆಯಾಗಿದ್ದನು. ಆದರೆ ಇತ್ತೀಚೆಗೆ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದನು. ಆದರೆ ಭಾನುವಾರ ರಾಮನವಮಿ ಆಚರಿಸಲು ಚಿಟ್ಟೆಮ್ಮ ತನ್ನ ಮೊಮ್ಮಕ್ಕಳನ್ನು (ಕೋಟಯ್ಯನ ಮಕ್ಕಳು) ಆಹ್ವಾನಿಸಿದ್ದಳು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೆ ಬಿಗಿಪಟ್ಟು- ಇಂದು ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಕುಡಿದ ಅಮಲಿನಲ್ಲಿ ಚಿಟ್ಟೆಮ್ಮ ಅವರ ಮನೆಗೆ ಅಪ್ಪಲ ಬಾಲ ಕೋಟಾಯ್ಯ ಬಂದಿದ್ದರು. ಈ ವೇಳೆ ಕೋಟಾಯ್ಯ ತನ್ನ ತಾಯಿ ಮತ್ತು ಇಬ್ಬರು ಮಕ್ಕಳ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ನಂತರ ಚಿಟ್ಟೆಮ್ಮ ಮಕ್ಕಳನ್ನು ರಕ್ಷಿಸಿ ಅಕ್ಕಪಕ್ಕದ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಇದನ್ನೂ ಓದಿ: ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ
ಕೋಟಾಯ್ಯ ಮತ್ತೆ ತಮ್ಮ ಮೇಲೆ ಎಲ್ಲಿ ಹಲ್ಲೆ ನಡೆಸುತ್ತಾನೋ ಮತ್ತು ಆತನಿಂದ ತಮ್ಮ ಮೊಮ್ಮಕ್ಕಳನ್ನು ಹೇಗೆ ರಕ್ಷಿಸುವುದೋ ಎಂಬ ಭಯದಿಂದ ಚಿಟ್ಟೆಮ್ಮ ಕೊಡಲಿಯಿಂದ ಕೋಟಾಯ್ಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಕೋಟಾಯ್ಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಈ ಸಂಬಂಧ ಸಾಕ್ಷಿ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.