DistrictsKarnatakaLatestMain PostVijayapura

ಕೆನಡಾ ವಧುವಿನ ಕೈ ಹಿಡಿದ ವಿಜಯಪುರ ವರ – ಅದ್ದೂರಿ ಮದುವೆಗೆ ಸಾಕ್ಷಿಯಾದ ಜನತೆ

Advertisements

ವಿಜಯಪುರ: ವಿಜಯಪುರದಲ್ಲಿ ಅಪರೂಪದ ಮದುವೆ ನಡೆದಿದೆ. ವಿಜಯಪುರುದ ಯುವಕ, ಕೆನಡಾ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಈ ಮುದ್ದಾದ ಜೋಡಿಯ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

ಹೌದು ಉತ್ತರ ಅಮೇರಿಕಾದ ಕೆನಡಾ ದೇಶದ ಸಾರಾ, ವಿಜಯಪುರ ನಿವಾಸಿ ರವಿಕುಮಾರ್ ಚಿಮ್ಮಲಗಿ ಕೈ ಹಿಡಿದಿದ್ದಾರೆ. ನಗರದ ಟೌನ್ ಪ್ಯಾಲೇಸ್ ಹಾಲ್‍ನಲ್ಲಿ ಈ ಅದ್ದೂರಿ ವಿವಾಹ ಜರುಗಿದೆ. ಹಲವಾರು ವರ್ಷಗಳಿಂದ ಕೆನಡಾದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರವಿಕುಮಾರ್ ಅದೇ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಾರಾ ಪರಸ್ಪರ ಪ್ರೀತಿಸುತ್ತಿದ್ದರು.

 

ನಂತರ ಇವರಿಬ್ಬರ ಪ್ರೀತಿಗೆ ಎರಡು ಕುಟುಂಬಗಳು ಪರಸ್ಪರ ಒಪ್ಪಿಗೆ ಸೂಚಿಸಿದ್ದಾರೆ. ಇದೀಗ ವಿಜಯಪುರದ ವಿಶ್ವನಾಥ್ ಚಿಮ್ಮಲಗಿ, ಶೋಭಾ ದಂಪತಿ ಪುತ್ರ ರವಿಕುಮಾರ್ ಅವರು ಕೆನಡಾದ ರೋಜ್‍ಮೇರಿ ಪ್ಲಾಟ್, ಹ್ಯಾರಿ ಫೋಲಾರ್ಡ್ ದಂಪತಿ ಪುತ್ರಿ ಸಾರಾ ಅವರನ್ನು ಗುರು-ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇದನ್ನೂ ಓದಿ: ಚಿಕಾಗೋ ಪರೇಡ್‌ ವೇಳೆ ಶೂಟೌಟ್‌, ದಿಕ್ಕಾಪಾಲಾಗಿ ಓಡಿದ ಜನ – 6 ಬಲಿ, 24 ಮಂದಿಗೆ ಗಾಯ

ವಿಶೇಷ ಅಂದರೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಲಾಗಿದೆ. ಹಿಂದೂ ಸಂಪ್ರದಾಯಕ್ಕೆ ಸಾರಾ ಕೂಡ ಮನಸ್ಸೋತ್ತಿದ್ದು, ಮದುವೆ ದಿನ ಸೀರೆಯುಟ್ಟು ಭಾರತೀಯ ನಾರಿಯರಂತೆ ಕಂಗಳೊಸಿದ್ದಾರೆ. ಈ ಅದ್ದೂರಿ ವಿವಾಹಕ್ಕೆ ಸಂಬಂಧಿಕರು, ಸ್ನೇಹಿತರು ಬಂದು ಹರಿಸಿ ಆಶೀರ್ವಾದಿಸಿದರೆ, ಮತ್ತೆ ಕೆಲವರು ಅಪರೂಪದ ಈ ಜೋಡಿ ಜೊತೆ ಸೆಲ್ಫಿ ಪಡೆದು ಸಂತಸ ಪಟ್ಟಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ – ನೀರಲ್ಲಿ ಕೊಚ್ಚಿ ಹೋದ 1ನೇ ತರಗತಿ ಬಾಲಕಿ

Live Tv

Leave a Reply

Your email address will not be published.

Back to top button