ವಿಜಯಪುರ: ಪಾಕಿಸ್ತಾನ ಪರ ಘೋಷಣೆ ಕೂಗಿ ಇಬ್ಬರು ಯುವತಿಯರು ಜೈಲು ಸೇರಿದ ಬೆನ್ನಲ್ಲೇ ಇಂತಹದ್ದೇ ಪ್ರಕರಣವೊಂದು ವಿಜಯಪುರದಲ್ಲಿ ನಡೆದಿದೆ. ‘ಲವ್ ಯೂ ಪಾಕ್ ಆರ್ಮಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟಿ ಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾರೆ.
ತಾಳಿಕೋಟೆಯ ಮೇರು ಬ್ಯಾಗವಾಟ್ ಎಂಬ ಯುವಕ ಪಾಕ್ ಪರ ಪೋಸ್ಟ್ ಅನ್ನು ತನ್ನ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದಾನೆ. ಈ ಪೋಸ್ಟ್ ಈಗ ವೈರಲ್ ಆಗಿದ್ದು, ಯುವಕನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
Advertisement
ಎಟೂಝಡ್ ಖಾತೆಯಲ್ಲಿ ಜನವರಿ 12ರಂದು ‘ಲವ್ ಯೂ ಪಾಕ್ ಆರ್ಮಿ’ ಎಂದು ಬರೆಯಲಾಗಿತ್ತು. ಇದನ್ನು ಮೇರು ಬ್ಯಾಗವಾಟ್ ಫೆಬ್ರವರಿ 22ರಂದು ಶೇರ್ ಮಾಡಿಕೊಂಡಿದ್ದಾನೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಆರೋಪಿಯನ್ನು ಮುದ್ದೇಬಿಹಾಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಎಟೂಝಡ್ ಫೇಸಬುಕ್ ಖಾತೆಯ ದೇಶದ್ರೋಹಿಗಾಗಿ ಶೋಧಕಾರ್ಯ ನಡೆದಿದ್ದಾರೆ.
Advertisement
ಆರೋಪಿ ಮೇರು ಬ್ಯಾಗವಾಟ್ ಪರ ವಕಾಲತ್ತು ವಹಿಸದಿರಲು ಮುದ್ದೇಬಿಹಾಳ ಬಾರ್ ಕೌನ್ಸಿಲ್‍ನಿಂದ ನಿರ್ಧಾರ ಕೈಗೊಳ್ಳಲಾಗಿದೆ. ತುರ್ತು ಸಭೆ ನಡೆಸಿದ ವಕೀಲರ ಸಂಘದ ಅಧ್ಯಕ್ಷರಾದ ಎಂ.ಎಚ್.ಕ್ವಾರಿ ಹಾಗೂ ಪದಾಧಿಕಾರಿಗಳು ಈ ನಿರ್ಧಾರ ಕೈಗೊಂಡಿರುವುದಾಗಿ ಪ್ರಕಟಣೆ ಹೊರಡಿಸಿದ್ದಾರೆ.
Advertisement
ಹುಬ್ಬಳ್ಳಿಯಲ್ಲಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿ ವಿಡಿಯೋ ಹರಿಬಿಟ್ಟಿದ್ದರು. ಈ ಬೆನ್ನಲ್ಲೇ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಅಮೂಲ್ಯ ಲಿಯೋನ ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಳು. ಇದಾದ ನಂತರದ ದಿವನೇ ಕಾಶ್ಮೀರ ಮುಕ್ತಿ, ದಲಿತ ಮುಕ್ತಿ, ಆದಿವಾಸಿ ಮುಕ್ತಿ ಎನ್ನುವ ಭಿತ್ತಿಪತ್ರ ಹಿಡಿದ ಆರೋಪದ ಅಡಿ ಆದ್ರ್ರಾಳನ್ನು ಪೊಲೀಸರು ಬಂಧಿಸಿದ್ದರು.