ವಿಜಯಪುರ: ಜಿಲ್ಲಾ ಕ್ರೀಡಾ ಆಸಕ್ತರಿಗೆ ಮತ್ತೊಂದು ಖುಷಿ ವಿಚಾರ ಹೊರಬಿದ್ದಿದೆ. ವಿಜಯಪುರದ ವಿದ್ಯಾರ್ಥಿನಿ ಕರ್ನಾಟಕ ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಿದ್ದಾಳೆ.
ಬಿ.ಎಲ್.ಡಿ.ಇ ಸಂಸ್ಥೆ ಎಸ್.ಎಸ್. `ಬ’ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅನ್ನಪೂರ್ಣ ಭೋಸಲೆ ಆಯ್ಕೆ ಅಗಿದ್ದಾಳೆ. 16 ವರ್ಷದ ಒಳಗಿನ ಕರ್ನಾಟಕ ರಾಜ್ಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾಳೆ.
ಜನವರಿ 20 ರಿಂದ 31 ರವರೆಗೆ ಪುದುಚೇರಿಯಲ್ಲಿ ನಡೆಯುವ ದಕ್ಷಿಣ ವಲಯ ಅಂತರ್ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅನ್ನಪೂರ್ಣ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾಳೆ. ಬಿ.ಎಲ್.ಡಿ.ಇ ಕ್ರೀಡಾ ನಿರ್ದೇಶಕ ಎಸ್.ಎಸ್.ಕೋರಿ ಈ ವಿಷಯನ್ನ ಪ್ರಕಟಿಸಿದ್ದು, ಅನ್ನಪೂರ್ಣ ಭೋಸಲೆ ಅವರ ಸಾಧನೆಗೆ ಬಿ.ಎಲ್.ಡಿ.ಇ ಅಧ್ಯಕ್ಷ ಎಂಬಿ ಪಾಟೀಲ್ ಹಾಗೂ ಆಡಳಿತ ಮಂಡಳಿ ಸೇರಿದಂತೆ ಶಾಲಾ ಸಿಬ್ಬಂದಿ ಅಭಿನಂದಿಸಿದ್ದಾರೆ. ಅನ್ನಪೂರ್ಣಳ ಸಾಧನೆಗೆ ಜಿಲ್ಲೆಯ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.