ವಿಜಯಪುರ: ಈಜಲು ಹೋಗಿ ವಿದ್ಯಾರ್ಥಿಯೋರ್ವ ನೀರು ಪಾಲಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ನಗರದ ಬೇಗಂ ತಲಾಬ್‌ನಲ್ಲಿ (Begum Talab) ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಹವೇಲಿ ಗಲ್ಲಿಯ ನಿವಾಸಿ ಅನಿರುದ್ದ ಕಲ್ಯಾಣಕುಮಾರ ಸಾಮ್ರಾಣಿ (20) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಖಾಸಗಿ ಬಸ್ – 42 ಭಕ್ತಾಧಿಗಳ ಸ್ಥಿತಿ ಗಂಭೀರ
ಇಂದು (ಡಿ.27) ರಜೆಯ ಹಿನ್ನೆಲೆ ಅನಿರುದ್ದ ತನ್ನ ಸಹೋದರ ಹಾಗೂ ಗೆಳೆಯರೊಂದಿಗೆ ಬೇಗಂ ತಲಾಬ್‌ಗೆ ತೆರಳಿದ್ದರು. ಈ ವೇಳೆ ಅನಿರುದ್ದ ಈಜಲು ಕೆರೆಗೆ ಇಳಿದಿದ್ದ. ಸಹೋದರ ಹಾಗೂ ಗೆಳೆಯರು ಎಷ್ಟೇ ಬೇಡ ಹೇಳಿದರೂ ಕೇಳದೇ ನೀರಿಗೆ ಇಳಿದಿದ್ದಾನೆ. ಬಳಿಕ ನೀರು ಪಾಲಾಗಿದ್ದಾನೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಮೃತನ ಶವಕ್ಕಾಗಿ ಶೋಧ ಕಾರ್ಯ ಆರಂಭಿಸಲಾಗಿದೆ. ಬೋಟ್ ಮೂಲಕ ನೀರಿನಲ್ಲಿ ಹುಡುಕಾಟ ನಡೆಸಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜಲನಗರ (Jalanagar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಅತ್ಮಹತ್ಯೆ ಕೇಸ್ – ಇಬ್ಬರು ಹೆಡ್‌ಕಾನ್‌ಸ್ಟೇಬಲ್ ಸಸ್ಪೆಂಡ್