ವಿಜಯಪುರ: ಸಿಂದಗಿ ಉಪಚುನಾವಣಾ ಕಣ ರಂಗೇರುತ್ತಿದೆ. ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ನಾಮಪತ್ರ ಸಲ್ಲಿಕೆ ಮುಂಚೆಯೇ ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಅಶೋಕ ಮನಗೂಳಿಗೆ ಶಾಕ್ ನೀಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪುರಸಭೆ ಸದಸ್ಯರು ಮುಂದಾಗಿದ್ದಾರೆ.
ಸದ್ಯ ಅಶೋಕ ಮನಗೂಳಿ ಅಣ್ಣ ಶಾಂತು ಮನಗೂಳಿ ಜೆಡಿಎಸ್ ನಿಂದ ಆಯ್ಕೆಯಾಗಿ ಪುರಸಭೆ ಹಾಲಿ ಅಧ್ಯಕ್ಷ ಆಗಿದ್ದಾರೆ. ಶಾಂತು ಮನಗೂಳಿ ಕಾರ್ಯವೈಖರಿ ಸರಿಯಿಲ್ಲ ಎಂದು ಆರೋಪಿಸಿ ಅವಿಶ್ವಾಸ ಗೊತ್ತುವಳಿಗೆ ಕಾಂಗ್ರೆಸ್ಸಿನ 7,ಜೆಡಿಎಸ್ ನ 5 ಸದಸ್ಯರು ಸಹಿ ಮಾಡಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ನೀಡಿದ್ದಾರೆ. ಇದನ್ನೂ ಓದಿ: 40 ಅಲ್ಲ, 4 ಜನ ಶಾಸಕರನ್ನ ಕಾಂಗ್ರೆಸ್ ಸೆಳೆಯಲಿ ನೋಡೋಣ, ಸಾಯೋ ಪಾರ್ಟಿಗೆ ಯಾರು ಹೋಗ್ತಾರೆ?:ಈಶ್ವರಪ್ಪ
ಪುರಸಭೆಯಲ್ಲಿ ಒಟ್ಟು 23 ಸದಸ್ಯರ ಬಲವಿದ್ದು, ಅದರಲ್ಲಿ 11 ಕಾಂಗ್ರೆಸ್, 6 ಜೆಡಿಎಸ್, 3 ಬಿಜೆಪಿ, 3 ಪಕ್ಷೇತ್ತರ ಸದಸ್ಯರಿದ್ದಾರೆ. ಅದರಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯ ಶಾಂತು ಮನಗೂಳಿಗೆ ಬೆಂಬಲ ನೀಡಿದ ಹಿನ್ನೆಲೆ 4 ಕಾಂಗ್ರೆಸ್ ಸದಸ್ಯರು ಅನರ್ಹರಾಗಿದ್ದಾರೆ.
https://www.youtube.com/watch?v=w6KXZLf6Sz8