ವಿಜಯಪುರ: ಹಾಡಹಾಗಲೇ ಕಣ್ಣಿಗೆ ಖಾರದಪುಡಿ ಎರಚಿ ಮೂವರು ದುಷ್ಕರ್ಮಿಗಳು ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ದರೋಡೆ ಮಾಡಿದ್ದಾರೆ.
ಗ್ರಾಮೀಣ ಕೋಟಕ್ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿನೋದ್ ಕುಮಾರ ಹಂಚನಾಳ, ಹಂಜಗಿ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘದಿಂದ 1.5 ಲಕ್ಷ ಹಣ ಸಂಗ್ರಹಿಸಿ ಕೊಂಡುಬರುವಾಗ ಈ ಕೃತ್ಯ ಎಸಗಲಾಗಿದೆ. ದರೋಡೆ ಮಾಡುವ ಸಂದರ್ಭದಲ್ಲಿ ವಿನೋದ್ಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.
Advertisement
Advertisement
ಗ್ರಾಮದಲ್ಲಿ ಹಣವನ್ನು ಸಂಗ್ರಹಿಸಿ ಬರುತ್ತಿದ್ದನ್ನು ಗಮನಿಸಿ ಬೈಕಿನಲ್ಲಿ ಹಿಂಬಾಲಿಸಿ ಬಂದ ಮೂವರು ಮುಸುಕುಧಾರಿಗಳು ಸಿನಿಮಾ ಶೈಲಿಯಲ್ಲಿ ಕಣ್ಣಿಗೆ ಖಾರದಪುಡಿ ಎರಚಿ ಚಾಕುವಿನಿಂದ ಹಲ್ಲೆ ಮಾಡಿ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.