ಪೊಲೀಸ್ ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆ!

Public TV
1 Min Read
vijayapura man commits suicide fearing police interrogation family alleges

– ಕುಟುಂಬಸ್ಥರ ಆರೋಪ

ವಿಜಯಪುರ: ಪೊಲೀಸ್ (Police) ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ನಿಡಗುಂದಿ (Nidgundi) ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ಮೌನೇಶ್ ಅಬ್ಬಿಹಾಳ (30) ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಮೃತನ ಸೋದರ ಮಾವ ಬಸವರಾಜ್ ಕಾಣೆಯಾಗಿದ್ದ. ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಮೌನೇಶ್‌ನನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದರು.

ಗುರುವಾರ ಸಹ ಮತ್ತೆ ವಿಚಾರಣೆಗೆ ಬರುವಂತೆ ಹೇಳಿದ್ದರು. ಆದರೆ ವಿಚಾರಣೆಗೆ ಹೆದರಿ ಯುವಕ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article