ವಿಜಯಪುರ: ಕಳೆದ ತಿಂಗಳು ನೂತನ ದರ್ಗಾವನ್ನು ಹಿಂದೂ ಧರ್ಮದ ಪ್ರಕಾರ ಪ್ರವೇಶ ಮಾಡಿ ವಿಜಯಪುರದತ್ತ ರಾಜ್ಯದ ಗಮನವನ್ನು ಮುಸ್ಲಿಂ ಬಾಂಧವರು ಸೆಳೆದಿದ್ದರು. ಇದೀಗ ವಿಜಯಪುರದ ಮುಸ್ಲಿಂ ಕುಟುಂಬವೊಂದು ನೂತನ ಮನೆಯ ಗೃಹ ಪ್ರವೇಶವನ್ನು ಹಿಂದೂ ಸಂಸ್ಕೃತಿ ಪ್ರಕಾರ ಮಾಡಿ ಮತ್ತೆ ರಾಜ್ಯದ ಗಮನವನ್ನು ತನ್ನತ್ತ ಸೆಳೆದಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಗಬೆಟ್ಟ ಗ್ರಾಮದ ಲಾಲಸಾಬ ನದಾಫ್ ಎಂಬುವರುವ ಡಿ.5 ರಂದು ನಾಗರಬೆಟ್ಟ ಗ್ರಾಮದಲ್ಲಿ ತಮ್ಮ ನೂತನ ಮನೆಯ ಗೃಹ ಪ್ರವೇಶವನ್ನು ಹಿಂದೂ ಸಂಸ್ಕೃತಿ ಪ್ರಕಾರ ನೆರವೇರಿಸಿದ್ದಾರೆ. ನವಗ್ರಹ ಹಾಗೂ ಲಕ್ಷ್ಮೀ ಪೂಜೆ ಮಾಡಿ ಗೃಹಪ್ರವೇಶ ಮಾಡಿದ್ದಾರೆ.
Advertisement
Advertisement
ಲಾಲಸಾಬ ನದಾಫ್ ನಾಗರಬೆಟ್ಟದ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದು, ಹಿಂದು ಧರ್ಮದ ಗೆಳಯರನ್ನ ಹೆಚ್ಚಾಗಿ ಹೊಂದಿದ್ದಾರೆ. ಇನ್ನು ನಾವು ಹಳ್ಳಿ ಜನರಾಗಿದ್ದು ನಾವು ಇಲ್ಲಿ ಎಲ್ಲ ಧರ್ಮದವರು ಒಂದಾಗಿಯೇ ಇರುತ್ತೇವೆ. ನಮ್ಮಲ್ಲಿ ಯಾವುದೆ ಬೇಧ ಭಾವ ಇರಲ್ಲ. ಅಲ್ಲದೆ ಎಲ್ಲ ಧರ್ಮವನ್ನು ಗೌರವಿಸುತ್ತೇವೆ. ಹಲವಾರು ವರ್ಷಗಳಿಂದ ನಮ್ಮ ಕುಟುಂಬ ಮುಸ್ಲಿಂ ಧರ್ಮದೊಂದಿಗೆ ಹಿಂದು ಧರ್ಮವನ್ನು ಪಾಲಿಸುತ್ತ ಬಂದಿದೆ. ಅದೇ ಕಾರಣಕ್ಕೆ ಗೃಹಪ್ರವೇಶದ ವೇಳೆ ಕುರಾನ್ ಪಠಣವನ್ನು ಮಾಡಿ ನವಗೃಹ ಹಾಗೂ ಲಕ್ಷ್ಮೀ ಪೂಜೆ ಮಾಡಿದ್ದೇವೆ ಎಂದು ಹೇಳುತ್ತಾರೆ.
Advertisement
ಲಾಲಸಾಬ ಕುಟುಂಬದ ಭಾವೈಕ್ಯತೆಯ ಭಾವ ಇತರರಿಗೆ ಮಾದರಿಯಾಗಿದೆ. ಇನ್ನು ಲಾಲಸಾಬ ಅವರ ಈ ಕಾರ್ಯಕ್ಕೆ ಪ್ರಶಂಸೆಗಳ ಮಹಾಪೂರ ಹರಿದು ಬರುತ್ತಿದೆ.