– ವಿಜಯೇಂದ್ರ ಮಹಾ ಭ್ರಷ್ಟ ಎಂದು ಲೇವಡಿ
ವಿಜಯಪುರ: ಬಿ.ಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಸಮರ ಸಾರಿರುವ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಉಚ್ಛಾಟನೆಯನ್ನೇ ಸವಾಲಾಗಿ ಸ್ವೀಕರಿಸಿ ಹೊಸ ಪಕ್ಷದ ಸ್ಥಾಪನೆ ಮಾಡುವುದಾಗಿ ಗುಡುಗಿದ್ದಾರೆ.
ಬಿಜೆಪಿಯಿಂದ (BJP) ಉಚ್ಛಾಟನೆಗೊಂಡ ಬಳಿಕ ಮೊದಲ ಬಾರಿಗೆ ವಿಜಯಪುರಕ್ಕೆ ಆಗಮಿಸಿದ ಯತ್ನಾಳ್ ಪ್ರಸಿದ್ಧ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಹಿಂದೂಗಳ (Hindus) ರಕ್ಷಣೆ ಆಗಲ್ಲ. ಆದ್ದರಿಂದ ಹಿಂದೂಗಳ ರಕ್ಷಣೆಗೆ ಹೊಸ ಪಕ್ಷ ಕಟ್ಟುವ ಅನಿವಾರ್ಯತೆ ಬಂದಿದೆ ಎಂದು ಹೇಳಿದ್ದಾರೆ.
ವಿಜಯೇಂದ್ರ ಮಹಾ ಭ್ರಷ್ಟ
ವಿಜಯೇಂದ್ರ ಒಬ್ಬ ಮಹಾ ಭ್ರಷ್ಟ. ಇವನನ್ನು ನಮ್ಮ ಮೇಲೆ ಏಕೆ ಹೇರುತ್ತಿರಿ? ಇವನಿಂದಾಗಿ ಬಿಎಸ್‌ವೈ ಜೈಲಿಗೆ ಹೋಗಬೇಕಾಯಿತು. ನಕಲಿ ಸಹಿ ಮಾಡಿದ ಆರೋಪ ವಿಜಯೇಂದ್ರ ಮೇಲೆ ಇದೆ. 40% ಸೇರಿದಂತೆ ಸಾಕಷ್ಟು ಹಗರಣಗಳಲ್ಲಿ ವಿಜಯೇಂದ್ರ ಹೆಸರಿದೆ. ಹೀಗೆ ಹಗರಣ ಮಾಡಿರುವ ಒಂದು ಕುಟುಂಬವನ್ನ ಪಕ್ಷದಲ್ಲಿ ಮುಂದುವರೆಸುದಾದರೆ ಹಿಂದುತ್ವವಾದಿಗಳು ಹಿಂದೂ ಜನತೆ ಒಂದು ನಿರ್ಣಯ ಕೈಗೊಳ್ಳಬೇಕಾಗುತ್ತೆ. ಆ ಬಗ್ಗೆ ಇಂದಿನಿಂದಲೇ ಆ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸುತ್ತೇವೆ ಎಂದು ಹೇಳಿದರು.
ವಿಜಯದಶಮಿ ವೇಳೆಗೆ ಹೊಸ ಪಕ್ಷ
ಜನರ ಅಭಿಪ್ರಾಯ ಸಂಗ್ರಹಿಸಿ ಒಂದು ಹಿಂದೂ ಪಕ್ಷ ಆಸ್ತಿತ್ವ ತರಬೇಕಾಗುತ್ತೆ. ಬಹಳಷ್ಟು ಜನರು ಬಿಜೆಪಿಯಿಂದ ಹಿಂದೂ ರಕ್ಷಣೆ ಮಾಡುತ್ತಿಲ್ಲವೆಂದು ಆಳಲು ತೋಡಿಕೊಂಡಿದ್ದಾರೆ. ಹಲವು ಹಿಂದೂ ಕಾರ್ಯಕರ್ತರು ಸಾವನಪ್ಪಿದ್ದರು ಎನ್‌ಕೌಂಟರ್ ಮಾಡುವಂತಹ ದಿಟ್ಟ ಕ್ರಮ ಕೈಗೊಂಡಿಲ್ಲ. ಇವರ ಕುಟುಂಬ ಹೊಂದಾಣಿಕೆ ರಾಜಕೀಯ ಮಾಡಿ ಪಕ್ಷವನ್ನ ದುರ್ಬಲ ಮಾಡಿದ್ದಾರೆ. ಹಿಂದೂಗಳ ರಕ್ಷಣೆ, ದೇಶಕ್ಕಾಗಿ ಹಿಂದೂ ಪಕ್ಷ ಆಸ್ವಿತ್ವ ತರಬೇಕಾಗಿದೆ. ನಾವು, ಬಿಜೆಪಿ-ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳಲ್ಲ. ಆದ್ರೆ ಇದೇ ಕಟುಂಬದ ಮೇಲೆ ವರಿಷ್ಟರು ನಿರ್ಭಲವಾದರೆ ನಮ್ಮ ದಾರಿ ನಾವು ಕಂಡುಕೊಳ್ಳಬೇಕಾಗುತ್ತೆ. ಹಿಂದೂ ಪಕ್ಷ ಕಟ್ಟುವ ಬಗ್ಗೆ ಬೀದರ್ ನಿಂದ ಹಿಡಿದು ಚಾಮರಾಜವರೆಗೂ ಒತ್ತಾಯಿಸಿದ್ದಾರೆ. ಹೊಸ ಪಕ್ಷದ ಬಗ್ಗೆ ನಾವು ಜನಾಭಿಪ್ರಾಯ ಸಂಗ್ರಹಿಸುತ್ತೇವೆ. ಒಂದು ವೇಳೆ ಹೊಸ ಪಕ್ಷದ ಪರವಾಗಿ ಅಭಿಪ್ರಾಯ ಬಂದ್ರೆ ಖಂಡಿತ ನಾವು ಹೊಸ ಪಕ್ಷವನ್ನ ವಿಜಯದಶಮಿ ವೇಳೆಗೆ ರಚನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹಿಂದೂಗಳ ಹೊಸ ವರ್ಷದ ದಿನವೇ ಸಂದೇಶ
ತಮ್ಮ ಸ್ವಾರ್ಥಕ್ಕಾಗಿ ಬಿಎಸ್‌ವೈ-ವಿಜಯೇಂದ್ರ ಹಿಂದುತ್ವವಾದಿಗಳನ್ನ ತುಳಿಯುತ್ತಾ ಬಂದಿದ್ದಾರೆ. ಅದಕ್ಕೆ ನಾನು ಈಗ ಬಲಿಯಾಗಿದ್ದಾನೆ. ಪಕ್ಷದಲ್ಲಿ ವಂಶಪಾರಪರ್ಯ ಮುಂದುವರೆಸಲು ಬಿಎಸ್‌ವೈ ಕುಟುಂಬ ಮುಂದಾಗಿದೆ. ಹೈಕಮಾಂಡ್‌ಗೆ ಮನವಿ ಮಾಡ್ತೀವಿ, ವಂಶಪಾರಂಪರ್ಯ, ಭ್ರಷ್ಟಾಚಾರದಲ್ಲಿರುವವರು, ವೈರಿ ಪಕ್ಷಗಳನ್ನ ಹೊಂದಾಣಿಕೆ ಇರುವ ನಾಯಕರನ್ನ ತೆಗೆದಿದ್ದರೆ ರಾಜ್ಯದ ಜನಕ್ಕೆ ಬಿಜೆಪಿ ಮೇಲಿನ ವಿಶ್ವಾಸ ಹೋಗುತ್ತದೆ. ಇದೇ ರೀತಿ ಮುಂದುವರೆದರೆ ನಾವು ಪರ್ಯಾಯ ಮಾರ್ಗ ಕಂಡು ಕೊಳ್ಳಬೇಕಾಗುತ್ತದೆ. ಹೈಕಮಾಂಡ್ ಪಕ್ಷದಲ್ಲಿ ವಂಶಪಾರಪರ್ಯ ಭ್ರಷ್ಟಚಾರಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಪರ್ಯಾಯವಾಗಿ ನಾವು ನಿಲ್ಲಬೇಕಾಗುತ್ತದೆ. ಯುಗಾದಿ ಹಬ್ಬದ ಹೊಸ ವರ್ಷದಿಂದ ಈ ಸಂದೇಶ ನೀಡುತ್ತೇನೆ ಎಂದು ತಿಳಿಸಿದರು.