ವಿಜಯಪುರ: ಖಾಸಗಿ ವ್ಯಕ್ತಿ ಜೊತೆಗೆ ವಾರ್ಡನ್ ಹಾಸ್ಟೆಲಿನಲ್ಲೇ ಸಲಿಂಗ ಕಾಮಕ್ರಿಯೆ ನಡೆಸಿದ ಘಟನೆ ವಿಜಯಪುರದ ಇಂಡಿ ತಾಲೂಕಿನ ವಸತಿ ಶಾಲೆಯೊಂದರಲ್ಲಿ ನಡೆದಿದೆ.
ಬಾಪು ಚವ್ಹಾಣ ಲೈಂಗಿಕ ಕ್ರಿಯೆ ನಡೆಸಿದ ವಾರ್ಡನ್. ಬಾಪು ಚವ್ಹಾಣ ಖಾಸಗಿ ವ್ಯಕ್ತಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದು, ಈ ವಿಡಿಯೋ ಈಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದೇ ರೀತಿ ವಸತಿ ನಿಲಯದ ಅಪ್ರಾಪ್ತ ವಿದ್ಯಾರ್ಥಿಗಳಿಗೂ ಲೈಂಗಿಕ ಕಿರುಕುಳ ನಡೆಸಿರುವ ಆರೋಪ ಕೇಳಿ ಬಂದಿದೆ. ಸದ್ಯ ವಾರ್ಡನ್ ಮೇಲೆ ಸೂಕ್ತ ಕ್ರಮಕ್ಕೆ ನೊಂದ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
Advertisement
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ನೊಂದ ವಿದ್ಯಾರ್ಥಿ, ವಾರ್ಡನ್ ರಾತ್ರಿ ಸುಮಾರು 1 ಗಂಟೆಗೆ ನಮ್ಮನ್ನು ರೂಂಗೆ ಕರೆದುಕೊಂಡು ಹೋಗುತ್ತಾನೆ. ನಮ್ಮ ನಿದ್ದೆಯನ್ನು ಹಾಳು ಮಾಡಿ ಆತನ ರೂಂ ಬಾಗಿಲು ಹಾಕಿ ಲೈಟ್ ಆಫ್ ಮಾಡುತ್ತಾನೆ. ಬಳಿಕ ನಮ್ಮ ದೇಹಕ್ಕೆ ಎಣ್ಣೆ ಹಚ್ಚಿ ಅಸಭ್ಯವಾಗಿ ವರ್ತಿಸುತ್ತಾನೆ. ಹೀಗಾಗಿ ಆತನಿಗೆ ಇಲ್ಲಿ ಕೆಲಸ ಮಾಡುವ ಅವಕಾಶವನ್ನು ನೀಡಬಾರದು ಎಂದು ತೋಡಿಕೊಂಡಿದ್ದಾನೆ.
Advertisement
ಈ ಸಂಬಂಧ ಹಾಸ್ಟೇಲ್ ವಾರ್ಡನ್ ಬಿ.ಸಿ.ಚವ್ಹಾಣ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಇಚ್ಛೆಯಿಂದ ಗಾಯವನ್ನುಂಟು ಮಾಡುವುದು) ಹಾಗೂ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.