-ಸಿಡಿಲು ಬಡಿದು ಎಮ್ಮೆ, ಹಸು ಸಾವು
ವಿಜಯಪುರ: ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಆಲಿಕಲ್ಲು ಮಳೆ ಸುರಿದಿದೆ.ಇದನ್ನೂ ಓದಿ: ಬೆಂಗಳೂರಿಗಿಂತ ಚೆನ್ನಾಗಿ 10,000 ಎಕ್ರೆ ಜಾಗದಲ್ಲಿ ಉತ್ತಮ ಸಿಟಿ ಮಾಡ್ತೀವಿ: ಡಿಕೆಶಿ
ಬಸವನ ಬಾಗೇವಾಡಿ (Basavana Bagewadi) ತಾಲೂಕಿನ ಮನಗೂಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಭಾರೀ ಮಳೆ ಸುರಿದ ಪರಿಣಾಮ ರಸ್ತೆಗಳು ಜಲಾವೃತ್ತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇನ್ನೂ ನಿಲ್ಲಿಸಿದ್ದ ಬೈಕ್ ಹಾಗೂ ಕಾರುಗಳು ಮುಳುಗುವಷ್ಟು ನೀರು ನಿಂತಿದ್ದು, ಅಂಗಡಿ ಮುಂಗಟ್ಟುಗಳ ಜಲಾವೃತಗೊಂಡಿದೆ. ಏಕಾಏಕಿ ಸುರಿದ ಮಳೆಗೆ ಜನರು ಕಕ್ಕಾಬಿಕ್ಕಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಸಿಡಿಲು ಬಡಿದು ಎಮ್ಮೆ, ಹಸು ಸಾವು:
ಜಿಲ್ಲೆಯಲ್ಲಿ ಸುರಿದ ಗುಡುಗು, ಸಿಡಿಲು ಸಹಿತ ಭಾರೀ ಮಳೆಗೆ ಬಸವನಬಾಗೇವಾಡಿ ತಾಲೂಕಿನ ಕರಭಂಟನಾಳ ಗ್ರಾಮದಲ್ಲಿ ಬಸವರಾಜ ಸದಾಶಿವ ಮಣ್ಣೂರ ಎಂಬುವವರಿಗೆ ಸೇರಿದ ಎಮ್ಮೆಯೊಂದು ಸಿಡಿಲು ಬಡಿದು ಸಾವನ್ನಪ್ಪಿದೆ. ಜೊತೆಗೆ ನಾಗೂರು ಗ್ರಾಮದಲ್ಲಿ ಬಸಪ್ಪ ಕ್ವಾಟಿ ಎಂಬುವವರಿಗೆ ಸೇರಿದ ಹಸುವೊಂದು ಸಾವನ್ನಪ್ಪಿದೆ.ಇದನ್ನೂ ಓದಿ: ತಮನ್ನಾಗೆ ಬಿಗ್ ಚಾನ್ಸ್- ಬಾಲಿವುಡ್‌ನ ಹೊಸ ಚಿತ್ರಕ್ಕೆ ಮಿಲ್ಕಿ ಬ್ಯೂಟಿ ನಾಯಕಿ