ವಿಜಯಪುರ: ಬರದ ಜಿಲ್ಲೆ ವಿಜಯಪುರದಲ್ಲಿ ಪ್ರತಿಭೆಗಳಿಗೆ ಬರವಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ವಿಜಯಪುರದ ಯುವತಿ ಪ್ರೀತಿ ಬಿರಾದಾರ ಇಂಡಿಗೋ ಏರ್‍ಲೈನ್ಸ್ ಕಂಪೆನಿಯಲ್ಲಿ ಪೈಲಟ್ ಆಗಿ ನೇಮಕಗೊಂಡಿದ್ದಾರೆ.
ಇದರಿಂದ ಉತ್ತರ ಕರ್ನಾಟಕದ ಪ್ರಥಮ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪ್ರೀತಿ ಪಾತ್ರರಾಗಿದ್ದಾರೆ. ಪ್ರೀತಿಯ ತಂದೆ ಸುಧೀರ್ ಬಿರಾದಾರ ಔಷಧಿ ವ್ಯಾಪಾರಸ್ಥರಾಗಿದ್ದು, ಮಗಳ ಈ ಸಾಧನೆಯಿಂದ ಪ್ರೀತಿ ಕುಟುಂಬಸ್ಥರು ಫುಲ್ ಖುಷಿ ಆಗಿದ್ದಾರೆ.
ಪ್ರೀತಿ ತನ್ನ ಮೊದಲ ಸಂಬಳವನ್ನು ಗೋ ಶಾಲೆಗೆ ಕೊಡುವುದಾಗಿ ನಿರ್ಧರಿಸಿದ್ದರು. ಅದರಂತೆ ವಿಜಯಪುರದ ಕಗ್ಗೋಡ ಗೋ ಶಾಲೆಗೆ ತನ್ನ ಮೊದಲ ಸಂಬಳ ನೀಡುವುದಾಗಿ ಪ್ರೀತಿ ಘೋಷಿಸಿ ಗೋ ಪ್ರೇಮ ತೋರಿದ್ದಾರೆ.