ವಿಜಯಪುರ: ಸಾಮಾನ್ಯವಾಗಿ ಯೋಗವನ್ನು ಇಚ್ಛೆ ಉಳ್ಳವರು ಮಾಡುತ್ತಾರೆ. ಮನೆಗೆ ಒಬ್ಬರು, ಇಬ್ಬರು ಯೋಗ ಮಾಡೋದು ಸರ್ವೇ ಸಾಮಾನ್ಯ. ಆದರೆ ವಿಜಯಪುರದಲ್ಲಿರುವ ಕುಟುಂಬವೊಂದರ ಎಲ್ಲ ಸದಸ್ಯರು ಪ್ರತಿನಿತ್ಯ ಯೋಗ ಮಾಡುತ್ತಾರೆ. ಜೊತೆಗೆ ಯಾರಾದರೂ ಯೋಗ ಮಾಡುತ್ತೇವೆ ಅಂದರೆ ಅವರಿಗೂ ಉಚಿತವಾಗಿ ಹೇಳಿಕೊಡುತ್ತಾರೆ.
Advertisement
ವಿಜಯಪುರದ ನಗರ ನಿವಾಸಿ ದತ್ತಾತ್ರೇಯ ಹಿಪ್ಪರಗಿ ಮತ್ತು ಅವರ ಮಂಜುಳಾ ಮತ್ತು ಮಕ್ಕಳಾದ ಶ್ರೀಗಿರಿ ಹಾಗೂ ರಾಘವೇಂದ್ರ ಎಂಬ ನಾಲ್ಕು ಜನರ ಈ ಕುಟುಂಬ ನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಂಡಿದೆ. ಇದರ ಜೊತೆ ದತ್ತಾತ್ರೇಯ ಅವರು ಓರ್ವ ಫೋಟೋಗ್ರಾಫರ್ ಕೂಡ ಆಗಿದ್ದು ವಿಜಯಪುರ ನಗರದಲ್ಲೇ ಒಂದು ಸ್ಟುಡಿಯೋ ತೆರೆದು ಜೀವನ ನಡೆಸುತ್ತಿದ್ದಾರೆ. ಇದರ ಜೊತೆಗೆ ಆಸಕ್ತಿ ಇರುವವರಿಗೆ ಯೋಗವನ್ನೂ ಹೇಳಿಕೊಡುತ್ತಿದ್ದಾರೆ.
Advertisement
Advertisement
ದತ್ತಾತ್ರೆಯ ಅವರ ಬಲ ಭುಜಕ್ಕೆ ಪೆಟ್ಟಾಗಿ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗಲಿಲ್ಲ. ಇದರ ಜೊತೆಗೆ ದತ್ತಾತ್ರೇಯ ಅವರಿಗೆ ವೈದ್ಯರು ಸಕ್ಕರೆ ಕಾಯಿಲೆ ಬರುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ ಎಂದು ಹೇಳಿದ್ದರಂತೆ. ಆ ಸಮಯದಲ್ಲಿ ಯೋಗಿ ರಾಮದೇವ್ ಬಾಬಾರ ಯೋಗ ನೋಡಿ ಆಕರ್ಷಿತರಾಗಿ ಯೋಗ ಮಾಡಲು 10 ವರ್ಷದ ಹಿಂದೆ ಪ್ರಾರಂಭ ಮಾಡಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ಸಕ್ಕರೆ ಕಾಯಿಲೆ ಆಗಲಿ, ಅಂಗಾಂಗಳ ನೋವಾಗಲಿ ಸುಳಿದಿಲ್ಲ ಎಂದು ಅವರು ಹೇಳುತ್ತಾರೆ.
Advertisement
ಈ ಕಾರಣದಿಂದಲೇ ಅವರು ತಮ್ಮ ಮಕ್ಕಳಿಗೆ 6 ವರ್ಷದ ಮಕ್ಕಳಿಂದಲೇ ಯೋಗ ಅಭ್ಯಾಸ ಹೇಳಿಕೊಟ್ಟು ಪ್ರತಿನಿತ್ಯ ಇಡೀ ಕುಟುಂಬವೇ ಬೆಳಗ್ಗೆ ಎದ್ದು ಯೋಗ ಮಾಡುತ್ತದೆ. ಇದರಿಂದ ನಮ್ಮ ಕುಟುಂಬ ಆರೋಗ್ಯಕರ ಕುಟುಂಬ ಆಗಿದೆ ಎಂದು ದತ್ತಾತ್ರೇಯ ಅವರ ಪತ್ನಿ ಮಂಜುಳಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರ ಮಕ್ಕಳು ಶ್ರೀಗಿರಿ ಮತ್ತು ರಾಘವೇಂದ್ರ ಕೂಡ ತಂದೆ-ತಾಯಿಯನ್ನು ಮೀರಿಸುವ ಮಟ್ಟಿಗೆ ಚಕ್ರಾಸನ, ಪ್ರಾಣಾಯಾಮ, ವೃಚ್ಚಿಕಾಸನ, ಕೌಂಡಿನ್ಯಾಸನ ಸೇರಿದಂತೆ ಕಷ್ಟಕರ ಯೋಗದ ಆಸನಗಳನ್ನು ಮಾಡುತ್ತಾರೆ.
ಯೋಗದಿಂದ ದತ್ತಾತ್ರೇಯ ಅವರ ಇಬ್ಬರು ಮಕ್ಕಳು ಜಿಲ್ಲೆ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗಳಲ್ಲಿ ಸಾಧನೆ ಮಾಡಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಮ್ಮ ಕುಟುಂಬದಂತೆ ಎಲ್ಲರು ಆರೋಗ್ಯಕರವಾಗಿರಬೇಕು ಅನ್ನೋದೇ ಇವರ ಮೂಲ ಉದ್ದೇಶ ಎಂದು ಅವರು ಹೇಳುತ್ತಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]