ವಿಜಯಪುರ: ಜಿಲ್ಲೆಯಲ್ಲಿ ಕಳೆದೆರೆಡು ದಿನಗಳಿಂದ ಸುರಿದ ಭಾರೀ ಮಳೆಗೆ ಡೋಣಿ ನದಿ (Doni River) ಮೈದುಂಬಿ ಹರಿಯುತ್ತಿದ್ದು, ಸಾತಿಹಾಳ ಸೇತುವೆ (Satihal Bridge) ಸಂಪೂರ್ಣವಾಗಿ ಜಲಾವೃತಗೊಂಡಿದೆ.ಇದನ್ನೂ ಓದಿ: ಕ್ಯಾಬಿನೆಟ್‌ನಲ್ಲಿ ನ್ಯಾ.ನಾಗಮೋಹನ್ ದಾಸ್ ವರದಿ ಮಂಡನೆ – ಆ.16ಕ್ಕೆ ವಿಶೇಷ ಸಂಪುಟ ಸಭೆ
ಎರಡು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆ ಇದೀಗ ಕಡಿಮೆಯಾಗಿದೆ. ಮಳೆ ನಿಂತರೂ ಕೂಡ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಲ್ಲಿ ಹರಿಯುವ ಡೋಣಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಪರಿಣಾಮ ಡೋಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಸಾತಿಹಾಳ ಸೇತುವೆ ಜಲಾವೃತಗೊಂಡಿದೆ. ಹೀಗಾಗಿ ಬಸವನಬಾಗೇವಾಡಿ – ಸಾತಿಹಾಳ – ದೇವರಹಿಪ್ಪರಗಿ ಮಾರ್ಗದ ಸಂಪರ್ಕ ಕಡಿತಗೊಂಡಿದೆ.
ಸೇತುವೆ ಜಲಾವೃತಗೊಂಡಿದ್ದರೂ ಜನರು ಅಪಾಯವನ್ನು ಲೆಕ್ಕಿಸದೇ ಸೇತುವೆ ಮೇಲೆ ಓಡಾಟ ನಡೆಸಿದ್ದಾರೆ. ಸೇತುವೆ ಮೇಲೆ ಹೊರಟಾಗ ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.ಇದನ್ನೂ ಓದಿ:ಬೆಂಗಳೂರಿನಲ್ಲಿ ದೆಹಲಿ ನಂತರದ ದೊಡ್ಡ ಮೆಟ್ರೋ ಸಂಚಾರ ಜಾಲ: ತೇಜಸ್ವಿ ಸೂರ್ಯ