ವಿಜಯಪುರ: ಬಡ ಹೈಸ್ಕೂಲ್ ಮಕ್ಕಳಿಗೆ ಪ್ರತಿವರ್ಷ ಜೂನ್-ಜುಲೈನಲ್ಲೇ ಸೈಕಲ್ ಕೊಡಬೇಕಿದ್ರೂ ಸಹ ಪ್ರಸಕ್ತ ಶೈಕ್ಷಣಿಕ ವರ್ಷವೇ ಮುಗಿಯುತ್ತಿದ್ರೂ ಇದೂವರೆಗೂ ವಿತರಣೆಯೇ ಆಗಿಲ್ಲ.
2018ನೇ ಸಾಲಿನಲ್ಲಿ ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಬರೋಬ್ಬರಿ 27,607 ಸೈಕಲ್‍ಗಳನ್ನು ಸರ್ಕಾರ ಮಂಜೂರು ಮಾಡಿದೆ. ಅದರಂತೆ ಜಲ್ಲೆಯಾದ್ಯಂತ ಆಯಾ ವಿಭಾಗಗಳಲ್ಲಿ ಅಷ್ಟೂ ಸೈಕಲ್‍ಗಳು ಧೂಳು ತಿನ್ನುತ್ತಾ ಬಿದ್ದಿವೆ. ಸೈಕಲ್‍ಗಳ ಚಕ್ರದಲ್ಲಿ ಗಾಳಿ ಹೋಗಿದ್ದು, ಟ್ಯೂಬ್ ಹಾಗೂ ಟೈರ್ ಸತ್ವ ಕಳೆದುಕೊಂಡಿವೆ. ಇಂತಹ ಸೈಕಲ್ ಪಡೆದ ಕೆಲ ವಿದ್ಯಾರ್ಥಿಗಳು ರಿಪೇರಿಗೆ ನೂರಾರು ರೂಪಾಯಿ ಖರ್ಚು ಮಾಡುವಂತಾಗಿದೆ ಎಂದು ಪೋಷಕರಾದ ಸಂತೋಷ್ ಆರೋಪಿಸಿದ್ದಾರೆ.
ತಿಂಗಳ ಹಿಂದೆ ಸೈಕಲ್ ಬಂದಾಗ ಕೆಲವು ಕಡೆ ಅಲ್ಪ ಪ್ರಮಾಣದಲ್ಲಿ ಸೈಕಲ್ ವಿತರಣೆ ಮಾಡಲಾಗಿದೆ. ಹೀಗೆ ಕೊಟ್ಟ ಬಹುತೇಕ ಸೈಕಲ್‍ಗಳಲ್ಲಿ ಸೀಟ್, ಬ್ರೇಕ್, ಲಾಕರ್, ಸ್ಟ್ಯಾಂಡ್, ಯಾವುದೂ ಸರಿ ಇಲ್ಲ. ಇಂತಹ ಕಳಪೆ ಗುಣಮಟ್ಟದ ಸೈಕಲ್ ಪಡೆದ ಮಕ್ಕಳು ಗೋಳಾಡ್ತಿದ್ದಾರೆ. ಇದೀಗ ಸೈಕಲ್ ವಿತರಣೆಗೆ ಗುತ್ತಿಗೆ ಪಡೆದ ಗುತ್ತಿಗೆದಾರರು ಇಂತಹದ್ದೇ ಸೈಕಲ್‍ಗಳ ವಿತರಣೆಗೆ ಮುಂದಾಗಿರುವಾಗಿ ವಿತರಕ ಪರಮಾನಂದ ಸಾತಿಹಾಳ ಹೇಳಿದ್ದಾರೆ.
ಒಟ್ಟಿನಲ್ಲಿ ಸೈಕಲ್‍ಗಳ ಗುಣಮಟ್ಟದ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ಎಲ್ಲಾ ಪರಿಶೀಲನೆ ಮುಗಿದಿದ್ದು ಇನ್ನೊಂದು ವಾರದಲ್ಲಿ ಸೈಕಲ್ ವಿತರಣೆ ಮಾಡ್ತೀವಿ ಅಂತಿದ್ದಾರೆ. ಇನ್ನೊಂದು ತಿಂಗಳಲ್ಲಿ ಪರೀಕ್ಷೆ ಮುಗಿದು ವಿದ್ಯಾರ್ಥಿಗಳಿಗೆ ರಜೆ ಬರೋ ಹೊತ್ತಲ್ಲಿ ಸೈಕಲ್ ನೀಡಿದ್ರೆ ಏನ್ ಪ್ರಯೋಜನ ಎಂದು ವಿದ್ಯಾರ್ಥಿಗಳ ಪೋಷಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv