– ಜಿಲ್ಲಾ ಬಿಜೆಪಿಯಲ್ಲೇ ಯತ್ನಾಳ್ ವಿರುದ್ಧ ಆಕ್ರೋಶ
ವಿಜಯಪುರ: ತಬ್ಲಿಘಿ ಜಮಾತ್ ಜಿಹಾದಿಗಳಿಗೆ ಅಂತಿಮ ಎಚ್ಚರಿಕೆ ಕೊಡಿ, ಸಹಕರಿಸದಿದ್ದರೆ ಗುಂಡಿಕ್ಕಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಟ್ವೀಟ್ ಮಾಡಿದ್ದಾರೆ.
ಕೊರೊನಾ ಸಂಬಂಧ ಪಟ್ಟಂತೆ ಅಲ್ಪಸಂಖ್ಯಾತರ ಬಗ್ಗೆ ಯಾವ ಹೇಳಿಕೆಯನ್ನು ನೀಡಬಾರದು ಎಂದು ಸಿಎಂ ಯಡ್ಡಿಯೂರಪ್ಪ ತಾಕೀತು ಮಾಡಿದ್ದರು. ಸಿಎಂ ಅವರ ಈ ಮಾತಿಗೆ ಬಸನಗೌಡ ಪಾಟೀಲ್ ಯತ್ನಾಳ್ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಅಲ್ಪಸಂಖ್ಯಾತರ ವಿರುದ್ಧ ಟ್ವೀಟ್ ಮಾಡಿ ತಮ್ಮ ವರಸೆ ಮುಂದುವರೆಸಿದ್ದಾರೆ.
Advertisement
ಕಾನೂನುಕ್ರಮ ವ ಎಚ್ಚರಿಕೆ ಕೊಡಬೇಕಾದದ್ದು ಕೊರೊನಾ ಹಬ್ಬಿಸುವ ಮತಾಂಧರಿಗೆ ಅವರನ್ನು ಸಮರ್ಥಿಸುವ ಮಾನವೀಯತೆ ಇರದ ಧಾರ್ಮಿಕ ರಾಜಕೀಯ ನಾಯಕರಿಗೆ ಹೊರತು ದೇಶಭಕ್ತ ????????ಸಮುದಾಯಗಳಿಗೆ ಅಲ್ಲ
ತಬಲೀಕ ಜಮಾತ್ ಜೀಹಾದಿಗಳಿಗೆ ಅಂತಿಮ ಎಚ್ಚರಿಕೆ ಕೊಡಿ ಸಹಕರಿಸದಿದ್ದರೆ ಗುಂಡಿಕ್ಕಿ
ನಿಮಗೆ ಇದು ಪ್ರಚೋದನೆ ಎನಿಸಿದರೆ ನನ್ನ ಮೇಲೆ ಕ್ರಮ….. ???? ????
— Basanagouda R Patil (Yatnal) (@BasanagoudaBJP) April 7, 2020
Advertisement
ಕಾನೂನು ಕ್ರಮದ ಎಚ್ಚರಿಕೆ ಕೊಡಬೇಕಾದದ್ದು ಕೊರೊನಾ ಹಬ್ಬಿಸುವ ಮತಾಂಧರಿಗೆ. ಅವರನ್ನು ಸಮರ್ಥಿಸುವ ಮಾನವೀಯತೆ ಇರದ ಧಾರ್ಮಿಕ ರಾಜಕೀಯ ನಾಯಕರಿಗೆ ಹೊರತು ದೇಶಭಕ್ತ ಸಮುದಾಯಗಳಿಗೆ ಅಲ್ಲ. ತಬ್ಲಿಘಿ ಜಮಾತ್ ಜಿಹಾದಿಗಳಿಗೆ ಅಂತಿಮ ಎಚ್ಚರಿಕೆ ಕೊಡಿ, ಸಹಕರಿಸದಿದ್ದರೆ ಗುಂಡಿಕ್ಕಿ. ನಿಮಗೆ ಇದು ಪ್ರಚೋದನೆ ಎನಿಸಿದರೆ ನನ್ನ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಯತ್ನಾಳ್ ಬರೆದುಕೊಂಡಿದ್ದಾರೆ.
Advertisement
Advertisement
ಈಗ ಇದಕ್ಕೆ ವಿಜಯಪುರ ಜಿಲ್ಲಾ ಬಿಜೆಪಿಯಲ್ಲೇ ಆಕ್ರೋಶ ವ್ಯಕ್ತವಾಗಿದೆ. ವಿಜಯಪುರ ಬಿಜೆಪಿ ಅಲ್ಪಸಂಖ್ಯಾತ ಮುಖಂಡ ಯಾಸೀನ ಜವಳಿ ನಮ್ಮ ನಾಯಕರಾದ ಯಡ್ಡಿಯೂರಪ್ಪ ನವರ ಹೆಸರು ಕೆಡಿಸಲು ಯತ್ನಾಳ್ ಮುಂದಾಗಿದ್ದಾರೆ. ಅಲ್ಲದೆ ಕೋಮು ಸೌಹಾರ್ದತೆ ಕೆಡಿಸುವ ಕುತಂತ್ರ ಇದಾಗಿದೆ. ಆದ್ದರಿಂದ ಕೂಡಲೆ ಯತ್ನಾಳ್ ನಮ್ಮ ನಾಯಕರಾದ ಯಡ್ಡಿಯೂರಪ್ಪ ಅವರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.