ವಿಜಯಪುರ: ಬಸನಗೌಡ ಪಾಟೀಲ್ ಯತ್ನಾಳ್‍ರಿಂದ ತೆರವಾದ ವಿಜಯಪುರ-ಬಾಗಲಕೋಟೆ ಪರಿಷತ್ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಸಹೋದರ ಸುನೀಲಗೌಡ ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ.
ಸುನೀಲಗೌಡ ಪಾಟೀಲ್ ಅವರು ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಎಂಬಿ ಪಾಟೀಲ್, ನನ್ನ ಸಹೋದರ ಸುನೀಲಗೌಡ ಪಾಟೀಲ್ ನನ್ನು ಪರಿಷತ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲು ಜೆಡಿಎಸ್ ನಿರ್ಧಾರ ತೆಗೆದುಕೊಂಡಿದೆ ತಿಳಿಸಿದರು.
Advertisement
Advertisement
ಎಂಎಲ್ ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದಾಖಲೆ ಮತಗಳಿಂದ ಗೆಲುತ್ತಾರೆ ಎಂದು ಯತ್ನಾಳ್ ಹೇಳಿದ್ದಾರೆ. ಈ ಬಗ್ಗೆ ಎಂಎಲ್‍ಸಿ ಚುನಾವಣಾ ಫಲಿತಾಂಶ ಬಂದ ಮೇಲೆ ಯಾರ ಸೋಲು, ಯಾರು ಗೆಲುವು ಗೊತ್ತಾಗುತ್ತದೆ ಎಂದು ಹೇಳಿ ತಿರುಗೇಟು ನೀಡಿದರು.
Advertisement
ನಾವು ಮತದಾರರ ಮೇಲೆ ವಿಶ್ವಾಸ ಹೊಂದಿದ್ದೇವೆ. ಆದರೆ ಯತ್ನಾಳ್ ಹಾಗೆ ಸ್ವಯಂ ಘೋಷಿತ ಮಾಡಿಕೊಳ್ಳಲು ತಯಾರಿಲ್ಲ. ಮತದಾರರ ಆರ್ಶೀವಾದದಿಂದ ನಮ್ಮ ಗೆಲುವು ಆಗಲಿದೆ ಎಂದು ಎಂಪಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
Advertisement
ನಾಮಪತ್ರ ಸಲ್ಲಿಕೆಗೆ ಕಾಂಗ್ರೆಸ್ ನ ಮುಖಂಡರಾದ ಎಸ್ ಆರ್ ಪಾಟೀಲ್, ಉಮಾಶ್ರೀ, ಎಚ್ ವೈ ಮೇಟಿ, ಸಿಎಸ್ ನಾಡಗೌಡ ಮತ್ತು ಜೆಡಿಎಸ್ ಸಚಿವ ಎಂ ಸಿ ಮನಗೂಳಿ, ಶಾಸಕ ದೇವಾನಂದ ಚವ್ಹಾಣ ಕೂಡ ಸಾಥ್ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv