– 44 ರೈತರ ಇಂದೀಕರಣ ರದ್ದು
ವಿಜಯಪುರ: ವಕ್ಫ್ ವಿವಾದದ (Waqf Board) ವಿಚಾರವಾಗಿ ಕರಾಳ ದೀಪಾವಳಿ ಆಚರಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ (Farmers) ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ರೈತರಿಗೆ ನೀಡಿದ್ದ ನೋಟಿಸ್ (Notice) ಅನ್ನು ಜಿಲ್ಲಾಡಳಿತ (District Administration) ಹಿಂಪಡೆದಿದೆ.
Advertisement
ವಕ್ಫ್ ದಂಗಲ್ ವಿಚಾರವಾಗಿ ವಿಜಯಪುರ ರೈತರು ನೋಟಿಸ್ ಹಿಂಪಡೆಯುವಂತೆ ಕರಾಳ ದೀಪಾವಳಿ ಆಚರಿಸುತ್ತಿದ್ದರು. ರೈತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿಸಿ ಭೂಬಾಲನ್ ರೈತರ ಸಮಸ್ಯೆ ಆಲಿಸಿ ಪಹಣಿಯಲ್ಲಿನ ವಕ್ಫ್ ಹೆಸರು ತೆಗೆಯೋದಾಗಿ ಭರವಸೆ ನೀಡಿದ್ದು, ಈಗಾಗಲೇ ಇಂಡಿ ತಾಲೂಕಿನ 41 ರೈತರ ಜಮೀನು ಇಂದೀಕರಣ ರದ್ದು ಮಾಡಿದ್ದೇವೆ ಎಂದರು. ಇದನ್ನೂ ಓದಿ: ಭಾರತ-ಚೀನಾ ಸೇನಾ ವಾಪಸಾತಿ ಪ್ರಕ್ರಿಯೆ ಪೂರ್ಣ – ದೀಪಾವಳಿಯಂದು ಉಭಯ ದೇಶಗಳ ಸೈನಿಕರಿಂದ ಸಿಹಿ ವಿನಿಮಯ
Advertisement
Advertisement
ನೋಟಿಸ್ ಹಿಂಪಡೆದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿ, ರೈತರಿಗೆ ನೀಡಿದ ನೋಟಿಸ್ ವಾಪಸ್ ಪಡೆದಿದ್ದು, 44 ರೈತರ ಇಂದೀಕರಣ ರದ್ದು ಮಾಡಿದ್ದೇವೆ. ಇನ್ನು ಮುಂದೆ ನೋಟಿಸ್ ನೀಡಲ್ಲ. ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ರೈತರ ದಾಖಲಾತಿ ಸರಿ ಪಡೆಸಲು ಟಾಸ್ಕ್‌ಫೋರ್ಸ್ ಇದೆ. ಈಗಾಗಲೇ ಟಾಸ್ಕ್‌ಫೋರ್ಸ್ ಕೆಲಸ ಶುರು ಮಾಡಿದೆ. ಉಳುಮೆ ಮಾಡುವ ರೈತರ ಫೈಲ್‌ಗಳನ್ನು ನಾವೇ ರೆಡಿ ಮಾಡಿ, ವಕ್ಫ್ ಬೋರ್ಡ್‌ನಿಂದ ಕೈ ಬಿಡಲು ನಾವೇ ಅಹವಾಲು ಇಡುತ್ತೇವೆ. ರೈತರು ಗಾಭರಿಯಾಗಬೇಡಿ. ಆತಂಕ ಪಡದೆ ದೀಪಾವಳಿ ಆಚರಿಸಿ ಎಂದು ತಿಳಿಸಿದ್ದಾರೆ. ನೋಟಿಸ್ ವಾಪಸ್ ಪಡೆಯುತ್ತಲೇ ರೈತರು ಹೋರಾಟ ಹಿಂಪಡೆದಿದ್ದಾರೆ. ಇದನ್ನೂ ಓದಿ: ಬ್ರಿಟನ್ ಕಿಂಗ್ ಚಾರ್ಲ್ಸ್ ದಂಪತಿಯಿಂದ ಬೆಂಗಳೂರಿಗೆ 4 ದಿನದ ರಹಸ್ಯ ಭೇಟಿ – ಇಂದು ವಾಪಸ್
Advertisement