ವಿಜಯಪುರ: ರಾಷ್ಟ್ರಕವಿ ಕುವೆಂಪು (Kuvempu) ಅವರ ಬರಹ ಬದಲಾಯಿಸಿರುವ ಕುರಿತು ರಾಜ್ಯಾದ್ಯಂತ ಆಕ್ರೋಶ ಎದ್ದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆ (Social Welfare Department) ಡಿಡಿ ಪುಂಡಲೀಕ ಮಾನವರ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯೆ ನಿಡಿದ ಅವರು, ನನಗೆ ಯಾವುದೇ ಲಿಖಿತ ಆದೇಶ ಬಂದಿಲ್ಲ. ವಸತಿ ಶಾಲೆಯ ಪ್ರಾಂಶುಪಾಲರ ಟೆಲಿಗ್ರಾಮ ಗ್ರೂಪ್‍ನಲ್ಲಿ ಹಾಕಿದ್ದಾರೆ. ಅದನ್ನ ಆಧರಿಸಿ ಎರಡು ವಸತಿ ಶಾಲೆಯಲ್ಲಿ ಬದಲಾಯಿಸಲಾಗಿದೆ ಎಂದರು. ಇದನ್ನೂ ಓದಿ: ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು- ಚರ್ಚೆಗೆ ಗ್ರಾಸವಾಯ್ತು ವಸತಿ ಶಾಲೆಗಳಲ್ಲಿನ ಬರಹ
Advertisement
Advertisement
ಒಟ್ಟು 23 ವಸತಿ ಶಾಲೆಯಲ್ಲಿ ಎರಡು ವಸತಿ ಶಾಲೆಯಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ. ನಮ್ಮ ಪ್ರಿನ್ಸಿಪಾಲ್ ಸೆಕ್ರೆಟ್ರಿ ಮಣಿವಣ್ಣನ್ ಅವರ ಟೆಲಿಗ್ರಾಮ ಮೆಸೇಜ್‍ನ ಆದೇಶದ ಮೇಲೆ ಬದಲಿಸಲಾಗಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಳ್ಳುತ್ತೇನೆ. ಶಾಲೆಯಲ್ಲಿ ಸಮಸ್ಯೆಗಳ ಬಗ್ಗೆ ಪ್ರಶ್ನಿಸುವ ಹಕ್ಕಿದೆ ಎನ್ನುವ ಹಿನ್ನೆಲೆ ಈ ರೀತಿ ಬದಲಾವಣೆ ಮಾಡಲಾಗಿದೆ ಎಮದು ಅವರು ಸ್ಪಷ್ಟಪಡಿಸಿದರು.
Advertisement
ಆಗಿದ್ದೇನು..?; ವಿಜಯಪುರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (Vijayapur School Tagline) ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈಮುಗಿದು ಬಳಗೆ ಬಾ’ ಎಂಬ ಸಾಲುಗಳ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿ ಶಾಲೆಯ ಪ್ರವೇಶ ದ್ವಾರದಲ್ಲಿ ಬರೆಯಲಾಗಿದೆ. ಇದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.