ವಿಜಯಪುರ: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಮಾಡಲಾಗಿದೆ. ಈ ಮಧ್ಯೆ ಕೊರೊನಾ ವಾರಿಯರ್ಸ್ ಮೇಲೆ ರಾಜ್ಯದಲ್ಲಿ ಆಗಾಗ ಹಲ್ಲೆಗಳು ನಡೆಯುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅವರು ಪೊಲೀಸ್ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ.
Advertisement
ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ. ನನ್ನ ತಾಲೂಕಿನ ಆಶಾ ಕಾರ್ಯಕರ್ತೆ, ವೈದ್ಯರ ಮೇಲೆ ಹಲ್ಲೆ ನಡೆಸಿದ್ರೆ ಅಂಥವರ ಕೈ-ಕಾಲು ಮುರಿಯಿರಿ. ಅಲ್ಲದೆ ಒದ್ದು ಒಳಗೆ ಹಾಕಿ. ಕೊರೊನಾ ವಾರಿಯರ್ಸ್ ಮೇಲೆ ದಾಳಿ ಮಾಡಿದವರಿಗೆ ಕೋರ್ಟ್ ಕೂಡ ಜಾಮೀನು ಕೊಡಬಾರದು ಎಂದು ತಿಳಿಸಿದ್ದಾರೆ.
Advertisement
Advertisement
ಶಾಸಕ ನಡಹಳ್ಳಿ ಖಡಕ್ ಆದೇಶಕ್ಕೆ ವಿಜಯಪುರ ಜಿಲ್ಲೆ ಜನತೆ ಸಲಾಂ ಎನ್ನುತ್ತಿದ್ದಾರೆ. ಅಲ್ಲದೆ ಪಬ್ಲಿಕ್ ನಲ್ಲೆ ನಿಂತು ಪೊಲೀಸ್ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದರಿಂದ ನಡಹಳ್ಳಿ ಓಪನ್ ಸ್ಟೆಟ್ಮೆಂಟ್ ಗೆ ಜನರು ಫುಲ್ ಖುಷಿಯಾಗಿದ್ದಾರೆ. ಸದ್ಯ ನಡಹಳ್ಳಿ ಖಡಕ್ ಮಾತು ಟಿಕ್ ಟಾಕ್, ವಾಟ್ಸಾಪ್ ಗಳಲ್ಲಿ ವೈರಲ್ ಆಗಿದೆ.
Advertisement
ಇದೇ ವೇಳೆ 25 ಸಾವಿರ ಬಡ ಕುಟುಂಬಗಳಿಗೆ ಫುಡ್ ಕಿಟ್ ನೀಡಿದ ಶಾಸಕರು ಬಳಿಕ ಆಶಾ ಕಾರ್ಯಕರ್ತೆಯರು, ವೈದ್ಯರ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.