– ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು
ವಿಜಯಪುರ: 5ರಿಂದ 10 ಸಾವಿರ ರೂಪಾಯಿ ಕೊಟ್ಟರೆ ನೀವು ಶಾಲೆಗೆ ಹೋಗಬೇಕಿಲ್ಲ, ಓದೋದಂತು ಬೇಕೇ ಇಲ್ಲ. ಕಾಸು ಕೊಟ್ರೆ ಬೇಕಾದ ಕ್ಲಾಸ್‍ನ ಮಾರ್ಕ್ಸ್ ಕಾರ್ಡ್ ನಿಮ್ಮ ಕೈಗಿಡುತ್ತಾರೆ. ಈ ವಿಚಾರ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯ ವೇಳೆ ಬಯಲಾಗಿದೆ.
ಹೌದು. ದುಡ್ಡು ಕೊಟ್ಟರೆ ಮಲ್ಲಪ್ಪ ಎಂಬಾತ ಏನ್ ಬೇಕಾದ್ರೂ ಮಾಡಿಕೊಡುತ್ತಾನೆ. ಅದರಲ್ಲೂ ಶಾಲೆಗೆ ಹೋಗದೇ ಇದ್ದರೂ ಪರೀಕ್ಷೆ ಬರೆಯದೇ ಇದ್ದರೂ ಒಂದರಿಂದ 10ನೇ ತರಗತಿವರೆಗೆ ಪಾಸ್ ಆಗಿದ್ದೀರಿ ಅಂತ ಒಂದೇ ದಿನದಲ್ಲಿ ಮಾರ್ಕ್ಸ್ ಕಾರ್ಡ್ ಮಾಡಿಸಿಕೊಡುತ್ತಾನೆ. ಅಂದಹಾಗೆ ಈತ ಮಾಡಿ ಕೊಡುವ ಸ್ಪಾಟ್ ಮಾಕ್ರ್ಸ್ ಕಾರ್ಡಿಗೆ 5-10 ಸಾವಿರ ರೂಪಾಯಿ ಕೊಡಬೇಕು.
Advertisement
Advertisement
ಮಲ್ಲಪ್ಪ ನಕಲಿ ಮಾರ್ಕ್ಸ್ ಕಾರ್ಡ್ ದಂಧೆಗೆ ಏಜೆಂಟ್ ಆಗಿರೋದು ಪಿ.ಕೆ ರಾಥೋಡ್ ಅನ್ನೋ ಮಹಾನುಭವನಿಂದ. ರಾಥೋಡ್ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕೂಡಗಿ ಗ್ರಾಮದ ಹೆಚ್ ಪಿ.ಎಸ್ ಶಾಲೆಯ ಮುಖ್ಯೋಪಾಧ್ಯಾಯ. ಅಲ್ಲದೆ ಮಲ್ಲಪ್ಪ ಮಾಡೋ ದಂಧೆಯಲ್ಲಿ ಶೇರ್ ತಗೊಂಡು ನಕಲಿ ಅಂಕಪಟ್ಟಿ ಮತ್ತು ಟಿಸಿ ಕೊಡೋ ಪುಣ್ಯಾತ್ಮ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿಯನ್ನೂ ರಾಥೋಡ್ ನಕಲಿ ಮಾಡುತ್ತಾರೆ.
Advertisement
ಸ್ವತಃ ಮಲ್ಲಪ್ಪ ಹೇಳುವಂತೆ ನಕಲಿ ಅಂಕಪಟ್ಟಿಗಳನ್ನ ಡಿಎಲ್, ಅಂಗನವಾಡಿ ಸಹಾಯಕಿಯರ ಕೆಲಸ ಗಿಟ್ಟಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ. ಪಬ್ಲಿಕ್ ಟಿವಿ ಸ್ಟಿಂಗ್ ಬಳಿಕವಾದ್ರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮಲ್ಲಪ್ಪ ಮತ್ತು ರಾಥೋಡ್ ವಿರುದ್ಧ ಕ್ರಮಕೈಗೊಳ್ಳಬೇಕಿದೆ.