ವಿಜಯಪುರ: ರಾಜ್ಯ ಸರ್ಕಾರದ ಗೃಹ ಸಚಿವ ಎಂ.ಬಿ ಪಾಟೀಲ್ ಅವರ ಪ್ರತಿಮೆ ನಿರ್ಮಾಣ ಮಾಡಲು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ್ ಚವ್ಹಾಣ್ ಮುಂದಾಗಿದ್ದಾರೆ.
ಈ ವಿಚಾರದ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಎಂ.ಬಿ ಪಾಟೀಲ್ ಅವರ ಪ್ರತಿಮೆಯನ್ನು ನಿರ್ಮಿಸಲು ಮುಂದಾಗಿರುವದಾಗಿ ತಿಳಿಸಿದರು.
Advertisement
ಹಾಲಿ ಗೃಹ ಮಂತ್ರಿ ಆಗಿರುವ ಎಂ.ಬಿ ಪಾಟೀಲ್ ಅವರು ಕಾಂಗ್ರೆಸ್ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದಾಗ ನಮ್ಮ ಜಿಲ್ಲೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಜೆಡಿಎಸ್ ವರಿಷ್ಠ ದೇವೆಗೌಡರಂತೆ ಅವರು ಕೂಡ ಜಿಲ್ಲೆಯ ಜನರಿಗೆ ನೀರಿನ ಕೊಡುಗೆ ನೀಡಿದ್ದಾರೆ. ಆದ ಕಾರಣ ವೈಯಕ್ತಿಕವಾಗಿ ಸೇರಿದಂತೆ ಸಾರ್ಜನಿಕರ ಸಹಯೋಗದಲ್ಲಿ ಪ್ರತಿಮೆ ಪ್ರತಿಷ್ಠಪನೆಗೆ ನಿರ್ಧರಿಸಿರುವುದಾಗಿ ಶಾಸಕ ದೇವಾನಂದ್ ಚವ್ಹಾಣ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಾಜಿ ಅವರು ನಮ್ಮ ಜಿಲ್ಲೆಗೆ ನೀರಿನ ವ್ಯವಸ್ಥೆ ಮಾಡಿಕೊಂಡುವಂತೆ ಎಂ.ಬಿ ಪಾಟೀಲ್ ಅವರಿಗೆ ಮನವಿ ಮಾಡಿದ್ದರು. ಅದರಂತೆ ನಮ್ಮ ಜಿಲ್ಲೆಗೆ ಪಾಟೀಲ್ ಅವರು ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅದಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಈ ಪ್ರತಿಮೆ ಮಾಡಿಸಲಿದ್ದೇವೆ ಎಂದು ಹೇಳಿದರು