ಬೆಂಗಳೂರು: ಆಲ್ಫ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ `ಶತಾಯ ಗತಾಯ` ಚಿತ್ರಕ್ಕಾಗಿ ಸಂದೀಪ್ ಗೌಡ ಅವರು ಬರೆದಿರುವ ‘ಹುಡುಗರ ಎದೆಮೇಲೆ ಹುಡುಗೀರ ತಿರುಬೋಕಿ ಶೋಕಿ. ಪ್ರೀತಿಪ್ರೇಮ ಎಲ್ಲಾ ಓಳು ಬರೀ ಗೋಳು ಬಿಟ್ಟಾಕಿ’ ಎಂಬ ಹಾಡನ್ನು ಖ್ಯಾತ ಗಾಯಕ ವಿಜಯ ಪ್ರಕಾಶ್ ಮುಂಬೈನ ತಮ್ಮದೇ ಸ್ಟುಡಿಯೊದಲ್ಲಿ ಹಾಡಿದ್ದಾರೆ. ಚಿತ್ರದ ಪ್ರಥಮಪ್ರತಿ ಸಿದ್ಧವಾಗಿದ್ದು, ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸಂದೀಪ್ ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಶಬರೀಶ್ ಅವರ ಛಾಯಾಗ್ರಹಣವಿದೆ. ರಘುನಂದನ್ ಜೈನ್ ಸಂಗೀತ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಅರವಿಂದ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ದಿನೇಶ್ ಜೋಗಿ ಅವರ ನಿರ್ಮಾಣ ಮೇಲ್ವಿಚಾರಣೆ ಹಾಗೂ ಕಲಾ ನಿರ್ದೇಶನವಿದೆ.
ರಘುರಾಮಪ್ಪ, ಸೋನುಗೌಡ, ಸಂದೀಪ್ ಗೌಡ, ಎಂ.ಎಸ್.ಉಮೇಶ್, ಗಡ್ಡಪ್ಪ, ಮಂಜುಳಾ ರೆಡ್ಡಿ, ಪ್ರದೀಪ್, ದಿನೇಶ್ ಜೋಗಿ, ಮಾ| ಮಧುಸೂಧನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.