ಬಾಲಿವುಡ್ನ ಜನಪ್ರಿಯ ಸಂಗೀತ ನಿರ್ದೇಶಕರಾದ ಸಲೀಂ-ಸುಲೇಮಾನ್ ಪ್ರತೀ ವರ್ಷ ‘ಭೂಮಿ’ ಎಂಬ ಆಲ್ಬಂ ಹೊರತರುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಆಲ್ಬಂನಲ್ಲಿ ಪರಿಸರ ಕಾಳಜಿ ಮೆರೆಯುವ ಹಲವು ಹಾಡುಗಳಿವೆ. ಸಾಮಾನ್ಯವಾಗಿ, ಇದೇ ಶೀರ್ಷಿಕೆಯಡಿ ಪ್ರತೀ ವರ್ಷ ಹಾಡುಗಳು ಮೂಡಿಬರುತ್ತಿದ್ದು, ಈ ಹಾಡುಗಳನ್ನು ದೇಶದ ಜನಪ್ರಿಯ ಗಾಯಕ-ಗಾಯಕಿಯರು ಹಾಡುತ್ತಾ ಬಂದಿದ್ದಾರೆ. ಈ ಬಾರಿಯ ವಿಶೇಷತೆಯೆಂದರೆ, ಕನ್ನಡದಲ್ಲಿ ಒಂದು ಹಾಡು ಮೂಡಿಬಂದಿದ್ದು, ‘ಭೂಮಿ 2022’ ಹೆಸರಿನ ಈ ಹಾಡಿಗೆ ಕನ್ನಡದ ಹೆಮ್ಮೆಯ ಗಾಯಕ ವಿಜಯಪ್ರಕಾಶ್ ಧ್ವನಿಯಾಗಿದ್ದಾರೆ.
Advertisement
‘ದುನಿಯಾ’ ಎಂದು ಶುರುವಾಗುವ ಈ ಹಾಡಿಗೆ ವಿಜಯಪ್ರಕಾಶ್ ಮತ್ತು ಸಲೀಮ್ ಮರ್ಚೆಂಟ್ ಧ್ವನಿಯಾಗಿದ್ದಾರೆ. ‘ಉಸಿರಿನ ಮ್ಯಾಲೆ, ಹಸಿರಿನ ಮ್ಯಾಲೆ ಪರಪಂಚ … ಕಲ್ಲುಗಳ ಮ್ಯಾಲೆ ಮಣ್ಣುಗಳ ಮ್ಯಾಲೆ ಪರಪಂಚ … ಗಾಳಿಯಾಗೇ ಭೂಮಿ ನಿಂತೈತೆ ಸೋಜಿಗ ನೋಡೋ … ಭೂಮಿಯಾಗೆ ಎಲ್ಲ ತುಂಬೈತೆ …’ ಎಂದು ಸಾಗುವ ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ತೌಫೀಕ್ ಖುರೇಷಿ ಅವರು ರಿದಮ್ ವಿಭಾಗದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೇಸರಿ ಬಿಕಿನಿಗೆ ನೆಟ್ಟಿಗರು ಗರಂ: ಬೈಕಾಟ್ ಪಠಾಣ್ ಟ್ರೆಂಡ್
Advertisement
Advertisement
ಇತ್ತೀಚೆಗೆ ಈ ಹಾಡನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಕೆ. ಸುಧಾಕರ್ ಬಿಡುಗಡೆ ಮಾಡಿದ್ದಾರೆ. ಪ್ರಕೃತಿಯ ಗೀತೆಯ ಬಗ್ಗೆ ಮುಖ್ಯಮಂತ್ರಿಗಳು ಮೆಚ್ಚುಗೆ ಸೂಚಿಸಿದರು. ಗಾಯಕ ವಿಜಯ್ ಪ್ರಕಾಶ್ ಅವರ ಕಾರ್ಯವನ್ನು ಮುಕ್ತಕಂಠದಿಂದ ಹೊಗಳಿದರು.