ಬಳ್ಳಾರಿ: ವಿಜಯನಗರ ಜಿಲ್ಲಾಧಿಕಾರಿ (Vijayanagara District Collector) ಎಂ ಎಸ್ ದಿವಾಕರ್ (MS Divakar) ಅವರು ಇಂದು ಹೊಸಪೇಟೆ ನಗರ ಪರಿಶೀಲನೆ ನಡೆಸಿದ್ದಾರೆ.
ಹೊಸಪೇಟೆ (Hosapete) ಬಸ್ ನಿಲ್ದಾಣ ತರಕಾರಿ ಮಾರುಕಟ್ಟೆ ಸೇರಿದಂತೆ ನಗರದ ನಾನಾ ಪ್ರದೇಶಗಳಿಗೆ ಭೇಟಿ ನೀಡಿ ನಗರದ ಸ್ವಚ್ಛತಾ ಕಾರ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯಗಳ ಕುರಿತು ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಖುದ್ದು ಸೈಕಲ್ ಏರಿ ನಗರ ವೀಕ್ಷಣೆ ನಡೆಸಿದ್ದಾರೆ.
ಈ ವೇಳೆಯಲ್ಲಿ ಪೌರ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ್ದು, ಕೂಡಲೇ ಅವರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಕಸ ನಿರ್ವಹಣೆ, ಚರಂಡಿಗಳ ಸ್ಥಿತಿಗತಿ ಹಾಗೂ ಬೀದಿನಾಯಿಗಳ ಹಾವಳಿ ಕುರಿತು ಮಾಹಿತಿ ಪಡೆಯುವುದು ಅವರ ನಗರ ಪ್ರದಕ್ಷಿಣೆಯ ಮುಖ್ಯ ಉದ್ದೇಶವಾಗಿತ್ತು. ಇದನ್ನೂ ಓದಿ: ಬೆಂಗಳೂರಿನ ಟೆಕ್ಕಿಯ ಶವ 4 ಸಾವಿರ ಅಡಿ ಆಳದ ಪ್ರಪಾತದಲ್ಲಿ ಪತ್ತೆ- ಕೆಲಸ ಹೋಗಿದ್ದಕ್ಕೆ ರಾಣಿ ಝರಿಗೆ ಹಾರಿ ಆತ್ಮಹತ್ಯೆ?
ಕೆಲವೆಡೆ ಸಾರ್ವಜನಿಕರು ಬೀದಿನಾಯಿ ಕಾಟದ ಬಗ್ಗೆ ತಮ್ಮ ಅಳಲು ತೋಡಿಕೊಂಡರು. ಕಸ ನಿರ್ವಹಣೆ, ಚರಂಡಿಗಳ ನಿರ್ವಹಣೆ ಬಗ್ಗೆ ಜಿಲ್ಲಾಧಿಕಾರಿ ಅವರು ಕೆಲವೆಡೆ ಸೂಕ್ತ ಸಲಹೆ ನೀಡಿದ್ದಾರೆ.