ವಿಜಯಪುರ: ವೆಲ್ಡಿಂಗ್ ಮಾಡುವಾಗ ಎಥಿನಾಲ್ ಟ್ಯಾಂಕರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ಎಥಿನಾಲ್ ತುಂಬಿದ ಟ್ಯಾಂಕರ್ ನ್ನು ಖಾಲಿ ಮಾಡಿ ಟ್ಯಾಂಕರ್ ಅನ ಕೆಲ ಭಾಗಕ್ಕೆ ವೆಲ್ಡಿಂಗ್‍ಗಾಗಿ ಗ್ಯಾರೇಜ್‍ಗೆ ತರಲಾಗಿತ್ತು. ವೆಲ್ಡಿಂಗ್ ಮಾಡುವಾಗ ಟ್ಯಾಂಕರ್ ಬ್ಲಾಸ್ಟ್ ಆಗಿ ಗ್ಯಾರೇಜ್‍ನ ಕೆಲಸಗಾರರಾದ ರಾಜು ಹಾಗೂ ಪ್ರಕಾಶ್ ಟೋನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಿಜಯಪುರ ನಗರದ ರೈಲ್ವೆ ನಿಲ್ದಾಣದ ಬಳಿ ನಾಡಗೌಡ ರೋಡಲೈನ್ಸ್ ಎಂಬ ಗ್ಯಾರೇಜ್ ನಲ್ಲಿ, ಈ ಘಟನೆ ನಡೆದಿದೆ. ಘಟನೆ ವೇಳೆ ಸ್ಥಳದಲ್ಲಿದ್ದ ವಿಶ್ವಾನಾಥ್ ಬಡಿಗೇರ, ಪ್ರಕಾಶ್ ಶಿರೋಳ, ಬಸವರಾಜ್ ಡೊಣೂರ್ ಎಂಬವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಭಾರೀ ಸ್ಫೋಟದಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.
ವಿಜಯಪುರದ ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ವಿಜಯಪುರ ಎಸ್ಪಿ ಪ್ರಕಾಶ್ ನಿಕ್ಕಮ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಸೂಚನೆ ನೀಡಿದ್ದೇನೆ. ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಪ್ರಕಾಶ್ ನಿಕ್ಕಮ್ ತಿಳಿಸಿದ್ದಾರೆ.