ನಟ ದರ್ಶನ್ (Darshan) ಕಳೆದ 10 ದಿನಗಳಿಂದ ರಾಜಸ್ಥಾನದಲ್ಲಿ ‘ಡೆವಿಲ್’ (Devil) ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪತಿಗೆ ವಿಜಯಲಕ್ಷ್ಮಿ ಸಾಥ್ ನೀಡಿದ್ದಾರೆ. ಇದೀಗ ರಾಜಸ್ಥಾನದಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ನಟನ ಪತ್ನಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಕೇಸ್: ದರ್ಶನ್ ಜಾಮೀನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಏ.22ಕ್ಕೆ ಮುಂದೂಡಿಕೆ
ಪತಿ ಜೊತೆ ವಿಜಯಲಕ್ಷ್ಮಿ (Vijayalakshmi) ಕೂಡ ರಾಜಸ್ಥಾನದಲ್ಲಿ (Rajasthan) ಬೀಡು ಬಿಟ್ಟಿದ್ದಾರೆ. ಬಿಡುವಿನ ವೇಳೆಯಲ್ಲಿ ಅಲ್ಲಿನ ಸುಮದರ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಇದೀಗ ರಾಜಸ್ಥಾನದಲ್ಲಿ ಅದ್ಧೂರಿಯಾಗಿರುವ ಬಂಗಲೆವೊಂದರಲ್ಲಿ ನಿಂತು ದರ್ಶನ್ ಪತ್ನಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಪೋಸ್ಟ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಬರುತ್ತಿವೆ. ಇದನ್ನೂ ಓದಿ:‘ಸ್ತ್ರೀ 2’ ಸಕ್ಸಸ್ ಬಳಿಕ ಶ್ರದ್ಧಾ ಕಪೂರ್‌ಗೆ ಒಲಿದ ಅದೃಷ್ಟ- ನಟಿಗೆ ಬಿಗ್ ಚಾನ್ಸ್
View this post on Instagram
ಸದ್ಯ ರಾಜಸ್ಥಾನದ ಉದಯಪುರದಲ್ಲಿ ‘ಡೆವಿಲ್’ ಚಿತ್ರದ ಶೂಟಿಂಗ್ ಭರದಿಂದ ನಡೆಯುತ್ತಿದೆ. ರಾಜಸ್ಥಾನ ಶೆಡ್ಯೂಲ್ ಚಿತ್ರೀಕರಣ ಮುಗಿಸಿ ಏ.4ರಂದು ಬೆಂಗಳೂರಿಗೆ ಪತ್ನಿಯೊಂದಿಗೆ ದರ್ಶನ್ ವಾಪಸ್ಸಾಗಲಿದ್ದಾರೆ.
‘ಡೆವಿಲ್’ ಚಿತ್ರಕ್ಕೆ ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ ಜೊತೆ ರಚನಾ ರೈ, ಶರ್ಮಿಳಾ ಮಾಂಡ್ರೆ, ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿದಂತೆ ನಟಿಸುತ್ತಿದ್ದಾರೆ.