ದರ್ಶನ್ (Darshan) ಜೈಲು ಸೇರಿದ ಬಳಿಕ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಸತತ ಕಾನೂನು ಹೋರಾಟ ನಡೆಸುತ್ತಿರುವ ಮಧ್ಯೆ ಗೆಳತಿಯರಾದ ಕಾವ್ಯ ಗೌಡ ಹಾಗೂ ಭವ್ಯ ಗೌಡ ಜೊತೆ ಹೋಟೆಲಿನಲ್ಲಿ ಕಾಣಿಸಿಕೊಂಡ ಫೋಟೋ ವೈರಲ್ ಆಗಿ ಆಗಿ ಟ್ರೋಲ್ ಆಗಿತ್ತು.
ದರ್ಶನ್ ಜೈಲಿನಲ್ಲಿ ಒದ್ದಾಡುತ್ತಿದ್ದರೆ ಒನ್ನೊಂದು ಕಡೆ ವಿಜಯಲಕ್ಷ್ಮಿ ಆರಾಮಾಗಿದ್ದಾರೆ ಎಂದಿದ್ದರು ನೆಟ್ಟಿಗರು. ಆದರೆ ಇದಕ್ಕೆಲ್ಲಾ ವಿಜಯಲಕ್ಷ್ಮಿ ಇನ್‌ಸ್ಟಾದಲ್ಲಿ ಸ್ಟೋರಿ ಪೋಸ್ಟ್ ಮಾಡಿ ಮಾರ್ಮಿಕವಾಗಿ ಉತ್ತರ ನೀಡಿ ಮನಸ್ಸಿನ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ʻಹೂಬಾಣʼದ ವೈರಲ್ ಹುಡ್ಗಿಗೆ ಬಂತು ಸಿನಿಮಾ ಆಫರ್
ನೀವು ಮಾನಸಿಕವಾಗಿ ಅಥವಾ ದೈಹಿಕವಾಗಿ ದಣಿದಿದ್ದಾಗ ಮುಂದೆ ಸಾಗಿದರೆ ಮತ್ತಷ್ಟು ಸಮಸ್ಯೆಯಾಗಬಹುದು. ಈ ಸಂದರ್ಭದಲ್ಲಿ ವಿಶ್ರಾಂತಿ ಪಡೆದರೆ ದೀರ್ಘಕಾಲೀನ ಯೋಗಕ್ಷೇಮಕ್ಕೆ ಒಳ್ಳೆಯದು ಎಂಬರ್ಥದ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಳೆದ ವಿಚಾರಣೆಯಲ್ಲಿ ದರ್ಶನ್ ತಮಗೆ ವಿಷ ಕೊಡುವಂತೆ ನ್ಯಾಯಾಧೀಶರ ಬಳಿ ಕೇಳಿಕೊಂಡಿದ್ದರು. ಈ ನೋವಿನ ನಡುವೆಯೇ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ಹಣ ಕಳ್ಳತನವಾಗಿತ್ತು. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ಅವರ ವಿರುದ್ಧ ಕೆಟ್ಟ ಸಂದೇಶ ಕಳುಹಿಸಿದ್ದರ ವಿರುದ್ಧವೂ ದೂರು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗೆ ಬಾರದ ವಿಜಯಲಕ್ಷ್ಮಿ ಅವರು ದರ್ಶನ್‌ಗೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿದ್ದಾರೆ. ಈ ನಡುವೆ ಗೆಳತಿಯರ ಜೊತೆ ಸುತ್ತಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.