ನಟ ದರ್ಶನ್ (Darshan) ಅನುಪಸ್ಥಿತಿಯಲ್ಲಿ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ದೀಪಾವಳಿ (Deepavali) ಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ಸುರ್‌ಸುರ್ ಬತ್ತಿ ಹಿಡಿದ ಫೋಟೋ ಹಿಡಿದು ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ “ಜಗತ್ತು ನಿಮ್ಮನ್ನು ಕೀಳಾಗಿ ಕಾಣುವಾಗ ಇನ್ನಷ್ಟು ಪ್ರಜ್ವಲಿಸಿ” ಎಂಬ ಸಂದೇಶ ಹಂಚಿಕೊಂಡಿದ್ದಾರೆ.
ಮನೆಯಲ್ಲಿದ್ದಿದ್ದರೆ ನಟ ದರ್ಶನ್ ಪ್ರತಿ ಬಾರಿಯಂತೆ ಈ ಬಾರಿಯೂ ಅದ್ದೂರಿಯಾಗಿ ದೀಪಾವಳಿ ಹಬ್ಬ ಆಚರಿಸುತ್ತಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಲ್ಲಿರುವ ದರ್ಶನ್‍ಗೆ ಯಾವುದೇ ಹಬ್ಬದ ಸಂಭ್ರಮವಿಲ್ಲ. ಕಳೆದ ಬಾರಿ ದೀಪಾವಳಿ ಹಬ್ಬಕ್ಕೆ ದರ್ಶನ್ ಮಧ್ಯಂತರ ಜಾಮೀನು ಪಡೆದುಕೊಂಡು ಮನೆಗೆ ಬಂದಿದ್ದರು. ಆದರೆ ಈ ಬಾರಿ ಜೈಲೇ ಗತಿಯಾಗಿದೆ. ಇದನ್ನೂ ಓದಿ: ಪವನ್ ವೆಂಕಟೇಶ್ ನಿರ್ದೇಶನದಲ್ಲಿ ʻಫಸ್ಟ್ ಸ್ಯಾಲರಿʼ – ಕಿರುಚಿತ್ರದ ಪೋಸ್ಟರ್ ರಿಲೀಸ್
ಮೂಲಗಳ ಪ್ರಕಾರ ದರ್ಶನ್ ಪ್ರತಿ ದೀಪಾವಳಿ ಹಬ್ಬದಂದೇ ವಾಹನ ಪೂಜೆ ಮಾಡುವ ಪದ್ಧತಿ ಪಾಲಿಸಿಕೊಂಡು ಬಂದಿದ್ದರಂತೆ. ಆದರೆ ಈ ಬಾರಿ ವಿಜಯಲಕ್ಷ್ಮಿ ಕಳೆದ ದಸರಾ ಹಬ್ಬದಂದೇ ವಾಹನ ಪೂಜೆ ಮಾಡಿ ಮುಗಿಸಿದ್ದಾರೆ. ಇದನ್ನೂ ಓದಿ: ಹುಡ್ಗೀರು ಬ್ರೇಕಪ್ ನೋವನ್ನ ಬೇಗ ಮರೆಯುತ್ತಾರೆ – ಮೌನ ಮುರಿದ ʻಶ್ರೀವಲ್ಲಿʼ

