ದರ್ಶನ್ ಜೊತೆಗಿನ ಹೊಸ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ- ವಾವ್ ಎಂದ ಫ್ಯಾನ್ಸ್

Public TV
1 Min Read
vijayalakshmi

ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಇದೀಗ ಪತಿ ಜೊತೆಗಿನ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಜೋಡಿಯ ಫೋಟೋ ನೋಡಿ ಫ್ಯಾನ್ಸ್ ವಾವ್ ಎಂದಿದ್ದಾರೆ. ಇದನ್ನೂ ಓದಿ: ಅಜಿತ್ ಕುಮಾರ್, ಬಾಲಯ್ಯಗೆ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

darshan 2

ದರ್ಶನ್ (Darshan) ಜೊತೆಗಿನ ವಿಶೇಷ ಫೋಟೋವೊಂದನ್ನು ವಿಜಯಲಕ್ಷ್ಮಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ನೆಚ್ಚಿನ ಕುದುರೆ ಜೊತೆ ದರ್ಶನ್ ದಂಪತಿ ಖುಷಿಯಿಂದ ಪೋಸ್ ನೀಡಿದ್ದಾರೆ. ಈ ಫೋಟೋ ಈಗ ನಟನ ಫ್ಯಾನ್ಸ್ ಪೇಜ್‌ಗಳಲ್ಲಿ ವೈರಲ್ ಆಗ್ತಿದೆ. ಇದನ್ನೂ ಓದಿ:ನಮ್ಮ ಜನಗಳನ್ನ ಸಾಯಿಸ್ತಾರೆ ಅಂದ್ರೆ ನಾವ್ ಯುದ್ಧ ಮಾಡ್ಲೇಬೇಕು – ಉಗ್ರರ ದಾಳಿ ಖಂಡಿಸಿದ ಪ್ರೇಮ್

Dharshan Vijayalakshmi Photo

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್ ಮೇಲೆ ದರ್ಶನ್ ಹೊರಬಂದ್ಮೇಲೆ ಪತಿಯ ವ್ಯವಹಾರವನ್ನು ವಿಜಯಲಕ್ಷ್ಮಿ ಅವರೇ ನೋಡಿಕೊಳ್ತಿದ್ದಾರೆ. ದರ್ಶನ್‌ಗೆ ಎಲ್ಲೇ ಶೂಟಿಂಗ್ ಇದ್ರೂ ಅಥವಾ ಯಾವುದೇ ಕಾರ್ಯಕ್ರಮ ಆಗಿದ್ರೂ ಪತ್ನಿ ಜೊತೆಯಾಗಿರುತ್ತಾರೆ. ಇದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಈ ಜೋಡಿ ಮೇಲೆ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

vijayalakshmi 1 2ಅಂದಹಾಗೆ, ʻಡೆವಿಲ್’ ಸಿನಿಮಾದ ಚಿತ್ರೀಕರಣವು ಮೈಸೂರು ಹಾಗೂ ರಾಜಸ್ಥಾನದಲ್ಲಿ ನಡೆದಿದೆ. ಈ ಸಿನಿಮಾ ಕೆಲಸ ಭರದಿಂದ ನಡೆಯುತ್ತಿದೆ. ದರ್ಶನ್ ಜೊತೆ ರಚನಾ ರೈ, ವಿನಯ್ ಗೌಡ, ಶರ್ಮಿಳಾ ಮಾಂಡ್ರೆ ನಟಿಸುತ್ತಿದ್ದಾರೆ. ‘ತಾರಕ್’ ಡೈರೆಕ್ಟರ್ ಮಿಲನಾ ಪ್ರಕಾಶ್ ʻಡೆವಿಲ್’ಗೆ ನಿರ್ದೇಶನ ಮಾಡುತ್ತಿದ್ದಾರೆ.

Share This Article