ಉಡುಪಿ: ಮಹಾರಾಷ್ಟ್ರದ ದುರ್ಗಾ ದೌಡ್ ಇದೇ ಮೊದಲ ಬಾರಿಗೆ ಕರಾವಳಿಯಲ್ಲಿ ನಡೆಯಿತು. ಉಡುಪಿಯ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ನಡೆದ ಈ ವಿರಾಟ್ ಪ್ರದರ್ಶನದಲ್ಲಿ ಐದು ಸಾವಿರಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಭಾಗಿಯಾಗಿದರು.
ವಿಜಯದಶಮಿಯ ಪ್ರಯುಕ್ತ ನಡೆಸಲಾದ ಈ ಮೆರವಣಿಗೆಯಲ್ಲಿ ಪೇಟಾ ಧರಿಸಿ, ಕೈಯಲ್ಲಿ ಭಗವಾಧ್ವಜ ಹಿಡಿದು ನಗರದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ಸಾಗಿತು. ನಗರದ ಕಡಿಯಾಳಿ ಮಹಿಷ ಮರ್ದಿನಿ ದೇವಸ್ಥಾನದಿಂದ ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಸ್ಥಾನದವರೆಗೆ ದುರ್ಗಾ ದೌಡ್ ನಡೆಯಿತು. ಸ್ವತ: ಇಂಧನ ಸಚಿವ ಸುನಿಲ್ ಕುಮಾರ್ ಮೆರವಣಿಗೆಯ ಮುಂಚೂಣಿಯಲ್ಲಿ ಭಾಗವಹಿಸಿದ್ದರು. ಕೋವಿಡ್ ನಿಯಮಾವಳಿಗಳ ಕಾರಣಕ್ಕೆ ಈ ಬೃಹತ್ ಆಯೋಜನೆ ನಡೆಯುವುದು ಕೊನೆಯ ಕ್ಷಣದವರೆಗೂ ಖಚಿತವಾಗಿರಲಿಲ್ಲ.
Advertisement
Advertisement
ಈ ಬೃಹತ್ ಸಮಾವೇಶಕ್ಕೆ ಅನುಮತಿ ಸಿಕ್ಕಿರಲಿಲ್ಲ. ಸಚಿವರು ಭಾಗವಹಿಸುವ ಮೂಲಕ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಉಡುಪಿ ಶಾಸಕರ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್ ದುರ್ಗಾ ದೌಡಲ್ಲಿ ಹೆಜ್ಜೆ ಹಾಕಿದರು. ಮಾರ್ಗದುದ್ದಕ್ಕೂ ಶಿವಾಜಿ ಮತ್ತು ರಾಮದೇವರ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಕಾರ್ಯಕರ್ತರು ಸಾಗಿದರು. ಇದನ್ನೂ ಓದಿ: ಕರ್ಣಾಟಕ ಬ್ಯಾಂಕಿನ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಪಂಜ ನೇಮಕ
Advertisement
ಮೆರವಣಿಗೆಯ ಮುಂಚೂಣಿಯಲ್ಲಿ ಕೆಲ ಕಾರ್ಯಕರ್ತರು ತಲವಾರುಗಳನ್ನು ಪ್ರದರ್ಶಿಸಿದರು. ಮಹಿಳಾ ತಂಡಗಳ ನೇತೃತ್ವ ವಹಿಸಿದ್ದ ಯುವತಿಯರು ಪ್ರಹಸನಗಳಲ್ಲಿ ಬಳಸುವ ಕತ್ತಿ, ಖಡ್ಗ ಹಿಡಿದು ಮೆರವಣಿಗೆ ಸಾಗಿದರು. ಬಳಿಕ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯ ಮಗ್ಗುಲಲ್ಲಿ ಬೃಹತ್ ಸಮಾವೇಶ ನಡೆಯಿತು. ಪ್ರಮುಖ ರಸ್ತೆಗಳಲ್ಲಿ ದುರ್ಗಾ ದೌಡ್ ಪೊಲೀಸರು ಹಾಜರಿದ್ದರು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದರು.