ಚಿಕ್ಕಮಗಳೂರು: ಜಿಲ್ಲೆ ಕಡೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮೈಲಾರಲಿಂಗ ಸ್ವಾಮಿ (Mylara Lingeshwara Swamy) ಕಾರ್ಣಿಕದ ನುಡಿಮುತ್ತುಗಳನ್ನ ನುಡಿದಿದ್ದು ಜಗತ್ತು ಶಾಂತಿ ಬಯಸಲಿದೆ ಎಂದು ಹೇಳಿದೆ.
ವಿಜಯದಶಮಿಯ (Vijayadashami) ಮರುದಿನವಾದ ಇಂದು ಬೆಳಗ್ಗಿನ ಜಾವ 4:42 ಕಾರ್ಣಿಕದ ನುಡಿಮುತ್ತುಗಳನ್ನ ನುಡಿದಿದೆ. ಇಡೀ ದಿನ ಉಪವಾಸವಿದ್ದು ಬೆಳಗ್ಗಿನದ ಪೂಜೆ ಬಳಿಕ ಬಿಲ್ಲನ್ನೇರಿ ದಶರಥ ಪೂಜಾರ್ ಅವರು ಭವಿಷ್ಯವಾಣಿ ನುಡಿದಿದ್ದಾರೆ.
Advertisement
ಭವಿಷ್ಯವಾಣಿ ಏನು?
ಇಟ್ಟ ರಾಮನ ಬಾಣ ಹುಸಿಯಿಲ್ಲ. ಸುರರು-ಅಸುರರು ಕಾದಾಡಿದರು. ಭಕ್ತಕೋಟಿಗೆ ಮಂಗಳವಾಯಿತು. ಶಾಂತಿ ಮಂತ್ರ ಪಠಿಸಿದರು. ಸರ್ವರು ಎಚ್ಚರದಿಂದಿರಬೇಕು ಎಂದು ಭವಿಷ್ಯವಾಣಿ ನುಡಿದಿದ್ದಾರೆ.
Advertisement
ವಿಶ್ಲೇಷಣೆ ಏನು?
ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ : ರಾಮ ಇಟ್ಟ ಬಾಣ ಹೇಗೆ ಗುರಿ ತಪ್ಪುವುದಿಲ್ಲವೋ ಅದೇ ರೀತಿ ಮೈಲಾರಲಿಂಗ ಹೇಳುವ ಮಾತು ತಪ್ಪುವುದಿಲ್ಲ. ಇದನ್ನೂ ಓದಿ: ಅಕ್ರಮ ಮದರಸಾಗಳಿಗೆ ದಿನಕ್ಕೆ 10 ಸಾವಿರ ದಂಡ: ಯೋಗಿ ಸರ್ಕಾರದಿಂದ ನೋಟಿಸ್
Advertisement
ಸುರರು-ಅಸುರರು ಕಾದಾಡಿದರು : ಈಗಾಗಲೇ ಜಗತ್ತಿನಲ್ಲಿ ಯುದ್ಧಗಳು ಆರಂಭವಾಗಿವೆ. ಉಕ್ರೇನ್-ರಷ್ಯಾದ ಬಳಿಕ ಹಮಾಸ್-ಇಸ್ರೇಲ್ ಮಧ್ಯೆ ಯುದ್ಧವಾಗುತ್ತಿದೆ. ಅಮೆರಿಕ ಇಸ್ರೇಲ್‍ಗೆ ಸಹಾಯ ಮಾಡುತ್ತಿದ್ದರೆ, ಕೆಲ ದೇಶಗಳು ಪ್ಯಾಲೆಸ್ತೇನ್ ಬೆಂಬಲ ನೀಡುತ್ತಿದ್ದಾರೆ. ಮುಂದೆಯೂ ಇಂತಹಾ ಸನ್ನಿವೇಶ ನಿರ್ಮಾಣವಾಗಬಹುದು.
Advertisement
ಶಾಂತಿ-ಮಂತ್ರ ಪಠಿಸಿದರು : ಜಗತ್ತಿನ ಮೇಲಿಂದ ಮೇಲೆ ಯುದ್ಧಗಳಾಗುತ್ತಿವೆ. ದೇಶಗಳು ಸೇರಿ ಜನ ಶಾಂತಿ ಮಂತ್ರ ಪಠಿಸುವ ಸ್ಥಿತಿ ನಿರ್ಮಾಣವಾಗಿದೆ. ಜಗತ್ತು ಶಾಂತಿ ಬಯಸಿದೆ.
ಸರ್ವರು ಎಚ್ಚರದಿಂದ ಇರಬೇಕು : ವಿಶ್ವದಲ್ಲಿ ಸಿದ್ಧಾಂತ ಸೇರಿದಂತೆ ನಾನಾ ಕಾರಣಗಳಿಂದಾಗಿ ಯುದ್ಧಗಳು ನಡೆಯುತ್ತಿವೆ. ಮುಂದೆಯೂ ನಡೆಯಬಹುದು. ದೇಶಗಳು ಸೇರಿದಂತೆ ಜನರು ಎಚ್ಚರದಿಂದ ಇರಬೇಕು ಎಂದು ಮೈಲಾರಲಿಂಗ ಸ್ವಾಮಿಯ ನುಡುಮುತ್ತುಗಳನ್ನು ಹಿರಿಯರು ವಿಶ್ಲೇಷಿಸಿದ್ದಾರೆ.
ಕಳೆದ ಎರಡ್ಮೂರು ವರ್ಷಗಳಿಂದ ಮೈಲಾರಲಿಂಗಸ್ವಾಮಿ ಭವಿಷ್ಯವಾಣಿಯಲ್ಲಿ ಮಳೆ ಬಗ್ಗೆ ಹೇಳುತ್ತಿತ್ತು. ಆದರೆ ಈ ವರ್ಷ ಮಳೆ ಬಗ್ಗೆ ಯಾವುದೇ ಭವಿಷ್ಯವಾಣಿ ಹೇಳದಿರೋದು ರೈತ ಸಮುದಾಯದಲ್ಲಿ ಬೇಸರ ಹಾಗೂ ಆತಂಕ ಹುಟ್ಟಿಸಿದೆ.
Web Stories