ವಿಜಯ್ ದಳಪತಿ (Vijay Thalapathy) ಅಭಿನಯದ `ಜನ ನಾಯಗನ್’ (Jana Nayagan) ಸಿನಿಮಾ 2026ರ ಜನವರಿ 9ಕ್ಕೆ ತೆರೆಕಾಣಲಿದೆ. ಈಗಾಗಲೇ ಚಿತ್ರತಂಡ ಈ ಬಗ್ಗೆ ಅನೌನ್ಸ್ ಕೂಡಾ ಮಾಡಿದೆ. ವಿಜಯ್ ದಳಪತಿ ಅಭಿನಯದ ಕೊನೆಯ ಸಿನಿಮಾ ಎನ್ನುವ ಕಾರಣದಿಂದ ಈ ಸಿನಿಮಾ ಮೇಲೆ ಸಹಜವಾಗಿಯೇ ಬೆಟ್ಟದಷ್ಟು ನಿರೀಕ್ಷೆಗಳು ದಳಪತಿ ಅಭಿಮಾನಿಗಳಲ್ಲಿದೆ. ಇದರ ನಡುವೆ ಶಿವಕಾರ್ತಿಕೇಯನ್ (Sivakarthikeyan) ನಟನೆಯ `ಪರಾಶಕ್ತಿ’ (Parasakthi) ಸಿನಿಮಾ ಕೂಡಾ ತೆರೆಗೆ ಬರಲು ಪೊಂಗಲ್ (ಸಂಕ್ರಾಂತಿ)ಗೆ ಡೇಟ್ ಗುರುತು ಮಾಡಿಕೊಂಡಿದೆಯಂತೆ.
ಎರಡೂ ಸಿನಿಮಾಗಳು ತೆರೆಗೆ ಬರುವ ಬಗ್ಗೆ ಪರಾಶಕ್ತಿ ಸಿನಿಮಾದ ನಿರ್ದೇಶಕಿ ಸುಧಾ ಕೊಂಗರಾ ಮೌನ ಮುರಿದಿದ್ದಾರೆ. `ಪರಾಶಕ್ತಿ’ ಸಿನಿಮಾ ಶೂಟಿಂಗ್ ಮಾಡುತ್ತಿದೆ. ಆದರೆ ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಎನ್ನುವ ಬಗ್ಗೆ ನಿರ್ಮಾಪಕರು ತೀರ್ಮಾನ ಮಾಡುತ್ತಾರೆ. ಆ ಬಗ್ಗೆ ನನಗೆ ಮಾಹಿತಿಯಿಲ್ಲ. ಆದ್ರೆ ಈ ಹಿಂದೆ ಪರಾಶಕ್ತಿ ಹಾಗೂ ಜನ ನಾಯಗನ್ ಸಿನಿಮಾಗಳು ಒಂದೇ ವೇಳೆಗೆ ರಿಲೀಸ್ ಆಗುತ್ತವೆ. ಎರಡೂ ಸಿನಿಮಾಗಳ ನಡುವೆ ಡೇಟ್ ಕ್ಲ್ಯಾಶ್ ಆಗುತ್ತೆ ಎಂದು ಸುದ್ದಿ ಹರಿದಾಡಿದ್ದಿದೆ ಎಂದಿದ್ದಾರೆ. ಇದನ್ನೂ ಓದಿ: ಶೂಟಿಂಗ್ ವೇಳೆ ನಟ ಶಾರುಖ್ ಖಾನ್‌ಗೆ ಗಾಯ
ಸದ್ಯ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುವ ಪರಾಶಕ್ತಿ ಚಿತ್ರತಂಡ ಹಾಗೂ ಜನ ನಾಯಗನ್ ಚಿತ್ರತಂಡ. ವಿಜಯ್ ದಳಪತಿ ಅಭಿಮಾನಿಗಳಂತು ಈ ಬಾರಿಯ ಪೊಂಗಲ್‌ನ್ನ ಅದ್ದೂರಿಯಾಗಿ `ಜನ ನಾಯಗನ್’ ಚಿತ್ರದ ಜೊತೆ ಸೆಲಬ್ರೆಟ್ ಮಾಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಪ್ರಾಧ್ಯಾಪಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ
ಇತ್ತ ಶಿವಕಾರ್ತಿಕೇಯನ್ ಚಿತ್ರದ ನಿರ್ಮಾಪಕರು ಕೂಡಾ ಪೊಂಗಲ್ ಹಬ್ಬದ ಸಂಭ್ರಮಕ್ಕೆ ಚಿತ್ರ ರಿಲೀಸ್ ಮಾಡುವುದಕ್ಕೆ ಕಾಯುತ್ತಿದ್ದಾರೆ ಎನ್ನಲಾಗ್ತಿದೆ. ಫೈನಲ್‌ನಲ್ಲಿ ಈ ಎರಡೂ ಸಿನಿಮಾಗಳು ರಿಲೀಸ್ ಆಗುತ್ತಾ? ಅಥವಾ ವಿಜಯ್ ದಳಪತಿ ಸಿನಿಮಾ ಮಾತ್ರ ಪೊಂಗಲ್‌ಗೆ ರಿಲೀಸ್ ಆಗುತ್ತಾ ಎಂದು ಕಾದು ನೋಡಬೇಕಿದೆ.