‘ಅಗ್ನಿಸಾಕ್ಷಿ’ (Agnisakshi) ಸೀರಿಯಲ್ ಮೂಲಕ ಮನೆ ಮಾತಾದ ನಟ ವಿಜಯ್ ಸೂರ್ಯ (Vijay Suriya) ಇದೀಗ ‘ಸ್ವೀಚ್ ಕೇಸ್ ಎನ್’ ಸಿನಿಮಾಗೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ‘ಸ್ವೀಚ್ ಕೇಸ್ ಎನ್’ (Switch Case n) ಚಿತ್ರದ ಝಲಕ್‌ಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಇದನ್ನೂ ಓದಿ:ಏಪ್ರಿಲ್ ಮೊದಲ ವಾರದಲ್ಲಿ ಬಹುನಿರೀಕ್ಷಿತ ‘ಮ್ಯಾಟ್ನಿ’
ಪ್ರಸ್ತುತ ‘ನಮ್ಮ ಲಚ್ಚಿ’ ಹೀರೋ ವಿಜಯ್ ಸೂರ್ಯ (Vijay Suriya) ತೆಲುಗು ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಕನ್ನಡ ಸಿನಿಮಾಗಳಲ್ಲಿ ವಿಜಯ್ ಮಿಂಚ್ತಿದ್ದಾರೆ. ಇದೀಗ ‘ಸ್ವೀಚ್ ಕೇಸ್ ಎನ್’ ಚಿತ್ರದ ಟ್ರೈಲರ್ ಮೂಲಕ ವಿಜಯ್ ಗಮನ ಸೆಳೆದಿದ್ದಾರೆ.
ಐಟಿ ಕಂಪನಿ ನಡೆಯುವ ಒಬ್ಬ ಹುಡುಗನ ಜರ್ನಿಯ ಕಥೆಯಾಗಿದೆ. ಸಿನಿಮಾ ರಿಯಲ್ ಬದುಕಿಗೆ ಕನೆಕ್ಟ್ ಆಗುವ ಹಾಗೇ ನೈಜವಾಗಿ ಮೂಡಿ ಬಂದಿದೆ. ರಿಯಲ್ ಸ್ಟೋರಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಐಟಿ ಕಂಪನಿಯಲ್ಲಿ ಮ್ಯಾನೇಜರ್ ಜೊತೆ ನಡೆಯುವ ಮಾತುಕತೆ, ಕೆಲಸದಲ್ಲಿ ಎದುರಿಸುವ ಚಾಲೆಂಜ್ ಇವೆಲ್ಲವನ್ನೂ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ವಿಜಯ್ ಸೂರ್ಯ ತಿಳಿಸಿದ್ದಾರೆ.
‘ಸ್ವೀಚ್ ಕೇಸ್ ಎನ್’ ಚಿತ್ರಕ್ಕೆ ಚೇತನ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ವಿಜಯ್ ಸೂರ್ಯಗೆ ನಾಯಕಿಯಾಗಿ ಶ್ವೇತಾ ವಿಜಯ್ ಕುಮಾರ್ ನಟಿಸಿದ್ದಾರೆ. ಇದು ಅವರ ಚೊಚ್ಚಲ ಚಿತ್ರವಾಗಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.
ಕ್ರೇಜಿಲೋಕ, ಇಷ್ಟಕಾಮ್ಯ, ಕದ್ದುಮುಚ್ಚಿ, ಗಾಳಿಪಟ 2, ವೀರಪುತ್ರ ಸಿನಿಮಾಗಳಲ್ಲಿ ವಿಜಯ್ ಸೂರ್ಯ ನಟಿಸಿ ಸೈ ಎನಿಸಿಕೊಂಡಿದ್ದಾರೆ.