ಕನ್ನಡದ ಅದೃಷ್ಟದ ನಟಿ ಅಂದ್ರೆ ರಶ್ಮಿಕಾ ಮಂದಣ್ಣ ಎಲ್ಲ ಇಂಡಸ್ಟ್ರಿಯಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ಸ್ಟಾರ್ ನಟರ ಚಿತ್ರಗಳಿಗೆ ರಶ್ಮಿಕಾರನ್ನೆ ಆಯ್ಕೆ ಮಾಡ್ತಿದ್ದಾರೆ. ಇದೀಗ ದಳಪತಿ ವಿಜಯ್ ನಟನೆಯ 66ನೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಇದೀಗ ಚಿತ್ರದ ಶೂಟಿಂಗ್ ಶುರುವಾಗಿದೆ.
ಕನ್ನಡದ `ಕಿರಿಕ್ ಪಾರ್ಟಿ’ ಚಿತ್ರದಿಂದ ಪರಿಚಿತರಾದ ರಶ್ಮಿಕಾ ಸದ್ಯ ಸೌತ್ ಸಿನಿಮಾ ರಂಗ ಮತ್ತು ಬಾಲಿವುಡ್ ಬಹುಬೇಡಿಕೆಯ ನಟಿಯಾಗಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ಇತ್ತೀಚಿನ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಟನೆಯ `ಪುಷ್ಪ’ ಸಿನಿಮಾ ಭರ್ಜರಿ ಸಕ್ಸಸ್ ಕಂಡ ಮೇಲಂತೂ ಕಿರಿಕ್ ಬೆಡಗಿಗೆ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಅಲ್ಲು ಅರ್ಜುನ್ ಜತೆ ತೆರೆ ಹಂಚಿಕೊಂಡಿದಾಯ್ತು, ಈಗ ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ಜತೆ ರಶ್ಮಿಕಾ ತೆರೆಹಂಚಿಕೊಳ್ತಿದ್ದಾರೆ.
View this post on Instagram
ಇತ್ತೀಚೆಗಷ್ಟೇ ದಳಪತಿ ವಿಜಯ್ ನಟನೆಯ 66ನೇ ಚಿತ್ರದ ಮುಹೂರ್ತ ನೆರವೇರಿತ್ತು. ಈ ವೇಳೆ ನಟಿ ರಶ್ಮಿಕಾ ಖುಷಿ ಖುಷಿಯಿಂದ ದಳಪತಿ ವಿಜಯ್‌ಗೆ ದೃಷ್ಟಿ ತೆಗೆದ ಫೋಟೋ ಕೂಡ ಭಾರೀ ವೈರಲ್ ಆಗಿತ್ತು. ಯಾವಾಗಿನಿಂದ ಶೂಟಿಂಗ್ ಶುರು ಅಂತಿದ್ದ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಚಿತ್ರತಂಡ ವಿಜಯ್ ಮತ್ತು ರಶ್ಮಿಕಾ ನಟನೆಯ ಹೊಸ ಚಿತ್ರದ ಶೂಟಿಂಗ್ ಶುರುವಾಗಿದೆ. ಹೈದರಾಬಾದ್‌ನಲ್ಲಿ ಚಿತ್ರೀಕರಣ ಭರದಿಂದ ಸಾಗ್ತಿದೆ. ಇದನ್ನೂ ಓದಿ: ಕನ್ನಡದ ಕೋಟ್ಯಧಿಪತಿ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ ಆತ್ಮಹತ್ಯೆ : ಅನುಮಾನ ವ್ಯಕ್ತ ಪಡಿಸಿದ ಸ್ನೇಹಿತರು
ವಂಶಿ ಪೈಡಿಪಲ್ಲಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಚಿತ್ರದಲ್ಲಿ ಚೆಂದದ ಲವ್‌ಸ್ಟೋರಿ ಜತೆ ಪವರ್‌ಫುಲ್ ಆ್ಯಕ್ಷನ್ ಕಂಟೆಂಟ್ ಹೊತ್ತು ಸೂಪರ್ ಸ್ಟಾರ್ ವಿಜಯ್ ಮತ್ತು ರಶ್ಮಿಕಾ ರಂಜಿಸಲು ಬರುತ್ತಿದ್ದಾರೆ. `ಬೀಸ್ಟ್’ ಚಿತ್ರದ ಹೀನಾಯ ಸೋಲಿನ ನಂತರ ರಶ್ಮಿಕಾ ಜತೆಗಿನ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡುತ್ತಾ ಅಂತಾ ಕಾದು ನೋಡಬೇಕಿದೆ.