ನವದೆಹಲಿ: ಪೇಟಿಎಂನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ ವಿಜಯ್ ಶೇಖರ್ ಅವರನ್ನು ಮರುನೇಮಕಗೊಳಿಸಲಾಗಿದೆ. ವಿಜಯ್ ಶೇಖರ್ ಅವರ ಪರವಾಗಿ ಶೇ.99.67 ರಷ್ಟು ಷೇರುದಾರರು ಮತ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ.
ಕಂಪನಿಯ ಶೇರುದಾರರಿಂದ ಬಹುಮತ ಪಡೆದ ವಿಜಯ್ ಶೇಖರ್ ಪೇಟಿಎಂನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ ಮುಂದಿನ 5 ವರ್ಷಗಳಿಗೆ ಮರುನೇಮಕಗೊಂಡಿದ್ದಾರೆ. ಇದನ್ನೂ ಓದಿ: ರಕ್ತದೊತ್ತಡ, ಮಧುಮೇಹದ ರಾಜಧಾನಿಯಾಗುತ್ತಿದೆ ಭಾರತ – ಸುಧಾಕರ್ ಆತಂಕ
ಶೇ.100 ಕ್ಕೆ ತುಂಬಾ ಹತ್ತಿರದಲ್ಲಿ ಮತ ಪಡೆದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ವಿಜಯ್ ಶೇಖರ್, ಇದು ನನ್ನ ನಾಯಕತ್ವದಲ್ಲಿ ಕಂಪನಿಯ ಹೂಡಿಕೆದಾರರು ಎಷ್ಟು ನಂಬಿಕೆ ಇಟ್ಟಿದ್ದಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಕಂಪನಿಯ ಬೆಳವಣಿಗೆ ಹಾಗೂ ಲಾಭದಾಯಕ ಗುರಿಯ ಬಗ್ಗೆ ಅವರು ವಿಶ್ವಾಸ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಟ್ಟವಿಲ್ಲದಿದ್ದರೂ ನಾನು ನಾಯಕನೇ: ಡೇವಿಡ್ ವಾರ್ನರ್