ಕಾಲಿವುಡ್ ನಟ ವಿಜಯ್ ಸೇತುಪತಿ (Vijay Sethupathi) ನಟನೆಯ ‘ಮಹಾರಾಜ’ (Maharaja) ಟ್ರೈಲರ್ ಇದೀಗ ರಿಲೀಸ್ ಆಗಿದೆ. ಟ್ರೈಲರ್ ನೋಡಿದವರಿಗೆ ತಲೆಗೆ ಹುಳ ಬಿಟ್ಟಂತೆ ಆಗಿದೆ. ವಿಜಯ ಸೇತುಪತಿ ಡಿಫರೆಂಟ್ ರೋಲ್‌ನಲ್ಲಿ ನಟಿಸಿದ್ದು, ಈ ಸಿನಿಮಾದ ಟ್ರೈಲರ್ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
‘ಮಹಾರಾಜ’ ಚಿತ್ರದ ಟ್ರೈಲರ್‌ನಲ್ಲಿ ವಿಜಯ್ ಸೇತುಪತಿ ಅವರ ಪಾತ್ರವನ್ನು ಪರಿಚಯಿಸಲಾಗಿದೆ. ಸರ್ ನನ್ನ ಹೆಸರು ಮಹಾರಾಜ. ನಾನು ಸಲೂನ್ ನಡೆಸುತ್ತಿದ್ದೇನೆ. ತನ್ನ ಲಕ್ಷ್ಮಿ ಕಳೆದುಹೋಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲು ಮಹಾರಾಜ ಬರುತ್ತಾನೆ. ಲಕ್ಷ್ಮಿ ಎಂದರೆ ಹಣ ಅಲ್ಲ, ಚಿನ್ನ ಅಲ್ಲ, ದಾಖಲೆ ಪತ್ರ ಅಲ್ಲ, ತಂಗಿ ಅಲ್ಲ, ಹೆಂಡತಿ ಅಲ್ಲ ಮಗು ಕೂಡ ಅಲ್ಲ ಎಂದು ಆತ ಹೇಳುತ್ತಾನೆ. ಆತನ ಮಾತಿನಿಂದ ಪೊಲೀಸರಿಗೂ ಕಿರಿಕಿರಿ ಆಗುತ್ತದೆ. ಲಕ್ಷ್ಮಿ ಎಂದರೆ ಏನು? ಯಾರು ಎಂದು ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ.
View this post on Instagram
ಸದ್ಯ ಟ್ರೈಲರ್ ಸಾಕಷ್ಟು ಕುತೂಹಲ ಕೆರಳಿಸಿದೆ. ವಿಜಯ್ ಏನನ್ನು ಹುಡುತ್ತಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈ ಸಿನಿಮಾದಲ್ಲಿ ಅನುರಾಗ್ ಕಶ್ಯಪ್ ಕೂಡ ನಟಿಸಿದ್ದು, ಟ್ರೈಲರ್ ಕೊನೆಯಲ್ಲಿ ಕಾಣಿಸಿಕೊಳ್ತಾರೆ. ಇದನ್ನೂ ಓದಿ:ಎರಡನೇ ಮದುವೆಯಾದ ಬಿಗ್ ಬಾಸ್ ವಿನ್ನರ್ ಫಾರೂಕಿ
ವಿಜಯ್ ಸೇತುಪತಿ ಜೊತೆ ಮಮತಾ ಮೋಹನ್ ದಾಸ್, ನಟರಾಜ್, ಭಾರತಿರಾಜ, ಅಭಿರಾಮಿ ಸೇರಿದಂತೆ ಹಲವರು ನಟಿಸಿದ್ದಾರೆ. ‘ಮಹಾರಾಜ’ ಸಿನಿಮಾವನ್ನು ನಿತಿಲನ್ ಸಾಮಿನಾಥನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕಾಂತಾರ ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.