ಅಲ್ಲು ಅರ್ಜುನ್ ನಟನೆಯ ಪುಷ್ಪಾ 2 ಸಿನಿಮಾದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ. ಪುಷ್ಪಾ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಸದ್ದು ಮಾಡದೇ ಇರುವ ಕಾರಣಕ್ಕಾಗಿ ಕೆಲವು ಮಾರ್ಪಾಟು ಮಾಡಿಕೊಂಡು ಪುಷ್ಪ 2 ಸಿನಿಮಾ ಮಾಡಲಿದ್ದಾರಂತೆ ನಿರ್ದೇಶಕರು. ಹಾಗಾಗಿ ಕಥೆ ಮತ್ತು ಪಾತ್ರಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
Advertisement
ಈ ಹಿಂದೆ ನಾಯಕಿಯ ಪಾತ್ರಕ್ಕೆ ಕತ್ತರಿ ಹಾಕಿದ್ದಾರೆ ಎನ್ನಲಾಗಿತ್ತು. ಬಹುತೇಕ ಸಿನಿಮಾ ಕಥಾನಾಯಕನ ಮೇಲೆಯೇ ಸಾಗುವುದರಿಂದ, ನಾಯಕಿಯ ಪಾತ್ರಗಳಿಗೆ ಬೆರಳೆಣಿಕೆಯ ದೃಶ್ಯಗಳನ್ನು ಹೆಣೆಲಾಗಿದೆ ಎನ್ನುವ ಮಾತಿದೆ. ಅಲ್ಲದೇ, ಪುಷ್ಪಾ ಸಿನಿಮಾದಲ್ಲಿ ಡಾಲಿ ಧನಂಜಯ್ ಅವರ ಪಾತ್ರವನ್ನು ಕಡಿಮೆ ತೋರಿಸಲಾಗಿತ್ತು. ಈ ಸಲ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಮತ್ತೊಂದು ಖುಷಿ ವಿಷಯ ಸಿಕ್ಕಿದೆ. ಪುಷ್ಪ 2 ಸಿನಿಮಾದಲ್ಲಿ ವಿಜಯ್ ಸೇತುಪತಿ ಕೂಡ ನಟಿಸಲಿದ್ದಾರಂತೆ. ಇದನ್ನೂ ಓದಿ:ಪಿಂಕ್ ಕಲರ್ ಸೀರೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ
Advertisement
Advertisement
ವಿಜಯ್ ಸೇತುಪತಿಗೆ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಹಾಗಾಗಿ ಆ ಅಭಿಮಾನಿಗಳನ್ನೂ ಸೆಳೆಯುವ ನಿಟ್ಟಿನಲ್ಲಿ ವಿಜಯ್ ಅವರನ್ನು ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗುತ್ತಿದೆಯಂತೆ. ಈ ಚಿತ್ರದಲ್ಲಿ ಅವರು ಹಿರಿಯ ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡಲಿದ್ದಾರಂತೆ. ಅದೊಂದು ರೀತಿಯಲ್ಲಿ ವಿಲನ್ ಶೇಡ್ ಇರುವಂತಹ ಪೊಲೀಸ್ ಅಧಿಕಾರಿ ಎನ್ನಲಾಗುತ್ತಿದೆ. ಅಂದುಕೊಂಡಂತೆ ಆಗಿದ್ದರೆ, ಪುಷ್ಪ ಸಿನಿಮಾದಲ್ಲೇ ವಿಜಯ್ ನಟಿಸಬೇಕಿತ್ತಂತೆ. ಹಲವು ಕಾರಣಗಳಿಂದಾಗಿ ಅವರಿಗೆ ನಟಿಸಲು ಸಾಧ್ಯವಾಗಿಲ್ಲ.
Advertisement
ಈಗಾಗಲೇ ವಿಜಯ್ ಸೇತುಪತಿ ಅವರನ್ನು ಸಿನಿಮಾ ಟೀಮ್ ಸಂಪರ್ಕಿಸಿದ್ದು, ಅವರು ಕೂಡ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರಂತೆ. ಈ ಪಾತ್ರಕ್ಕೂ ಹೆಚ್ಚು ಸ್ಕೋಪ್ ಇರಲಿದೆ ಎನ್ನುವ ಸುದ್ದಿಯೂ ಇದೆ. ಹಾಗಾಗಿ ಈ ಬಾರಿ ಪುರುಷ ಪಾತ್ರಗಳೇ ಹೆಚ್ಚಾಗಿ ತೆರೆಯ ಮೇಲೆ ಇರಲಿವೆ.