ಕಾಲಿವುಡ್‌ನ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಸದ್ಯ ಹಿಂದಿ ಸಿನಿಮಾಗಳ ಮುಖ ಮಾಡಿದ್ದಾರೆ. ಶಾರುಖ್ ನಟನೆಯ `ಜವಾನ್’ ಚಿತ್ರತಂಡಕ್ಕೆ ವಿಜಯ್ ಸೇರಿಕೊಂಡಿದ್ದಾರೆ. ಇದೀಗ ಈ ಚಿತ್ರಕ್ಕೆ ಪಡೆದಿರುವ ಸಂಭಾವನೆ ವಿಚಾರವಾಗಿ ವಿಜಯ್ ಸೇತುಪತಿ ಸಖತ್ ಸೌಂಡ್ ಮಾಡುತ್ತಿದ್ದಾರೆ.
ದಕ್ಷಿಣದ ಸಿನಿಮಾಗಳ ಮೂಲಕ ಸಕ್ಸಸ್‌ಫುಲ್ ನಟನಾಗಿ ಗುರುತಿಸಿಕೊಂಡಿರುವ ವಿಜಯ್ ಸೇತುಪತಿಗೆ ಬಾಲಿವುಡ್‌ನಲ್ಲೂ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ನಿರ್ದೇಶಕ ಅಟ್ಲೀ ತಮ್ಮ ಮುಂಬರುವ `ಜವಾನ್’ ಚಿತ್ರಕ್ಕೆ ವಿಜಯ್ ಸೇತುಪತಿ ಅವರೇ ತಮ್ಮ ಪ್ರಾಜೆಕ್ಟ್‌ಗೆ ಬೇಕು ಎಂದು ಒಂದೊಳ್ಳೆ ಸಂಭಾವನೆ ನೀಡಿ, ಈ ಸಿನಿಮಾಗೆ ಫಿಕ್ಸ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಮತ್ತೆ ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸುಶ್ಮಿತಾ ಸೇನ್
ಶಾರುಖ್ ಖಾನ್ ಮುಂದೆ ಪವರ್‌ಫುಲ್ ಪಾತ್ರದಲ್ಲಿ ನಟಿಸಲು ತಮಗೆ ಅರಸಿ ಬಂದಿದ್ದ ಸಾಕಷ್ಟು ಪ್ರಾಜೆಕ್ಟ್ ಅನ್ನ ವಿಜಯ್ ಕೈಬಿಟ್ಟಿದ್ದಾರೆ. 15 ಕೋಟಿ ಇದ್ದ ತಮ್ಮ ಸಂಭಾವನೆಯನ್ನ 20 ಕೋಟಿಗೆ ಹೆಚ್ಚಿಕೊಂಡಿದ್ದಾರೆ.
`ಜವಾನ್’ ಚಿತ್ರದಲ್ಲಿ ಶಾರುಖ್ ಮತ್ತು ನಯನತಾರಾ ಎದುರು ವಿಜಯ್ ಸೇತುಪತಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.