ಕನ್ನಡ ಚಿತ್ರರಂಗದ ಚಿನ್ನಾರಿಮುತ್ತ ನಟ ವಿಜಯ್ ರಾಘವೇಂದ್ರ ನಟನೆಯ `ಎಫ್‌ಐಆರ್’ 6 ಟು 6 ಚಿತ್ರದ ಮೂಲಕ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದ್ದಾರೆ. ಈ ಚಿತ್ರದ ಮೂಲಕ ಹೊಸಬರ ತಂಡಕ್ಕೆ ವಿಜಯ್ ರಾಘವೇಂದ್ರ ಸಾಥ್ ನೀಡಿದ್ದಾರೆ.
ವಿಜಯ್ ರಾಘವೇಂದ್ರ ನಟನೆಯ ಹೊಸ ಚಿತ್ರ `ಎಫ್‌ಐಆರ್’ 6 ಟು 6 ಅನೌನ್ಸ್ ಆಗಿದ್ದು, ಚಿತ್ರಕ್ಕೆ ರಮಣ್ ರಾಜ್ ಕೆ ನಿರ್ದೇಶನ ಮಾಡಲಿದ್ದಾರೆ. ಬೆಂಗಳೂರಿನ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿದ್ದು, ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ `ಎಫ್‌ಐಆರ್’ 6 ಟು 6 ಚಿತ್ರದಲ್ಲಿ ವಿಜಯ್ ರಾಘವೇಂದ್ರ ಎಂದೂ ಕಾಣಿಸಿಕೊಂಡಿರದ ಭಿನ್ನ ಪಾತ್ರದ ಮೂಲಕ ರಂಜಿಸಲಿದ್ದಾರೆ. ನಟ ವಿಜಯ್‌ಗೆ ನಾಯಕಿಯಾಗಿ ಅಕ್ಷಿತಾ ಬೋಪಯ್ಯ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಯಶ್ ಶೆಟ್ಟಿ, ಬಾಲರಾಜ್ ವಾಡಿ, ಎಸ್ ಕೆ ನಾಗೇಂದ್ರ ಅರಸ್, ಶ್ರೀ ರಾಜು ಸೇರಿದಂತೆ ಹಲವರು ಬಣ್ಣ ಹಚ್ಚಲಿದ್ದಾರೆ. ಇದನ್ನೂ ಓದಿ:ಕೆಲವೇ ಹೊತ್ತಿನಲ್ಲಿ ಮಲಯಾಳಂ ಸ್ಟಾರ್ ನಟ ದಿಲೀಪ್ ಪ್ರಕರಣ ತೀರ್ಪು
24/7 ಮತ್ತು ʻವಿರಾಮದ ನಂತರʼ ಚಿತ್ರಗಳನ್ನ ನಿರ್ದೇಶಿಸಿದ್ದ ರಮಣ್ ರಾಜ್ ಕೆ `ಎಫ್‌ಐಆರ್’ 6 ಟು 6 ಕಥೆಗೆ ಯಶ್ ಫಿಲ್ಮಂ ಪ್ರೊಡಕ್ಷನ್ ಬ್ಯಾನರ್ ನಡಿ ಭಾಗ್ಯ ಆರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಬೆಂಗಳೂರಿನ ಸುತ್ತಮುತ್ತ `ಎಫ್‌ಐಆರ್’ 6 ಟು 6 ಚಿತ್ರೀಕರಣ ಭರದಿಂದ ಸಾಗ್ತಿದೆ. ಇನ್ನು ನಟ ವಿಜಯ್ ರಾಘವೇಂದ್ರ ಅವರ ಹೊಸ ಗೆಟಪ್ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.