ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ (Vijay Raghavendra) ಅವರು ಶಿರಡಿ ದೇವಸ್ಥಾನಕ್ಕೆ (Shiradi Temple) ಭೇಟಿ ನೀಡಿದ್ದಾರೆ. ಸಿನಿಮಾವೊಂದರ ರಿಲೀಸ್ ಬಳಿಕ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೆ ಹೋಗಿದ್ದಾರೆ. ಈ ಕುರಿತ ಫೋಟೋವೊಂದನ್ನ ನಟ ಹಂಚಿಕೊಂಡಿದ್ದಾರೆ.
ವಿಜಯ್ ರಾಘವೇಂದ್ರ ಅವರು ಶಿರಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ ಸ್ಪಂದನಾ ಅಗಲಿ ಒಂದು ತಿಂಗಳಾಗಿದೆ. ಮತ್ತೆ ನಟ ಸಿನಿಮಾ ಕೆಲಸಗಳತ್ತ ಮುಖ ಮಾಡಿದ್ದಾರೆ. ಸದ್ಯ ಕೆಲಸಕ್ಕೆಲ್ಲಾ ಬ್ರೇಕ್ ನೀಡಿ ದೇವರ ಸನ್ನಿಧಿಗೆ ನಟ ತೆರಳಿದ್ದಾರೆ. ಇದನ್ನೂ ಓದಿ:ಕಾಗೆ ಮೇಲಿನ ಕಥೆಯ ಮೂಲಕ ಮತ್ತೆ ಚಿತ್ರರಂಗಕ್ಕೆ ಬಂದ ದಿಲೀಪ್
ಸ್ಪಂದನಾ (Spandana) ಪತಿಯ ಕೆಲಸಕ್ಕೆ ಸದಾ ಸಾಥ್ ನೀಡುತ್ತಿದ್ದರು. ವಿಜಯ್ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಸ್ಪಂದನಾ, ನಿರ್ಮಾಪಕಿಯಾಗಿ ಗಟ್ಟಿ ನೆಲೆ ನಿಲ್ಲುವ ಹಂಬಲವಿತ್ತು. ಮಗ ಶೌರ್ಯನನ್ನು ಹೀರೋ ಮಾಡುವ ಕನಸು ಕಂಡಿದ್ದರು. ಅದು ನನಸಾಗದೇ ಹೋಯ್ತು.
ಆಗಸ್ಟ್ 6ರಂದು ಭಾನುವಾರ ಹೃದಯಾಘಾತದಿಂದ ಸ್ಪಂದನಾ ವಿಜಯ್ ವಿಧಿವಶರಾದರು. ಥೈಲ್ಯಾಂಡ್‌ನಲ್ಲಿ ವಿಜಯ್ ಪತ್ನಿ ಕೊನೆಯುಸಿರೆಳೆದರು.