ನಾನೆಂದೂ ನಿನ್ನವ, ಕೇವಲ ನಿನ್ನವ- ಸ್ಪಂದನಾ ಬಗ್ಗೆ ವಿಜಯ ರಾಘವೇಂದ್ರ ಭಾವುಕ ಪತ್ರ

Public TV
1 Min Read
spandana vijay raghavendra 3 1

ಟ ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಅಗಲಿ ಇಂದಿಗೆ 13 ದಿನಗಳು ಕಳೆದಿವೆ. ಪತ್ನಿಯ ನಿಧನದಿಂದ ಮೌನಕ್ಕೆ ಶರಣಾಗಿದ್ದ ವಿಜಯ ಈಗ ಸ್ಪಂದನಾ ಬಗ್ಗೆ ಭಾವುಕರಾಗಿ ವೀಡಿಯೋ ಮೂಲಕ ಮನದಾಳದ ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಸ್ಪಂದನಾ ನೆನಪನ್ನ ತಮ್ಮೊಳಗಿನ ಪ್ರೀತಿಯನ್ನ ಅವರು ಇದೀಗ ಬಿಚ್ಚಿಟ್ಟಿದ್ದಾರೆ.

spandana vijay raghavendra 12

ಸ್ಪಂದನಾ ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ. ಕೇವಲ ನಿನ್ನವ ಎಂದು ವಿಜಯ್ ರಾಘವೇಂದ್ರ ಅವರು ಭಾವನ್ಮಾತಕವಾಗಿ ಸಾಲುಗಳನ್ನು ಹೇಳಿಕೊಂಡಿದ್ದಾರೆ.  ಇದನ್ನೂ ಓದಿ:ಮದುವೆ ಮುನ್ನ ಅಭಿಮಾನಿಗಳಿಗೆ ಹರ್ಷಿಕಾ-ಭುವನ್ ಕೊಟ್ಟರು ಗುಡ್ ನ್ಯೂಸ್

ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಆಗಸ್ಟ್ 26ರಂದು 2017ರಲ್ಲಿ ವಿಜಯ-ಸ್ಪಂದನಾ ಮದುವೆಯಾದರು. ಅವರ ದಾಂಪತ್ಯಕ್ಕೆ ಪ್ರೀತಿಗೆ ಶೌರ್ಯ ಎಂಬ ಪುತ್ರ ಸಾಕ್ಷಿಯಾಗಿದ್ದಾರೆ. ಸ್ಪಂದನಾ ಅನಿರೀಕ್ಷಿತ ಅಗಲಿಕೆ ಕುಟುಂಬಕ್ಕೆ ಶಾಕ್ ನೀಡಿದೆ.

ಆಗಸ್ಟ್ 6ರಂದು ಹೃದಯಾಘಾತದಿಂದ (Heart Attack) ಸ್ಪಂದನಾ ಬ್ಯಾಕಾಂಕ್‌ನಲ್ಲಿ ನಿಧನರಾದರು. ಆಗಸ್ಟ್ 9ರಂದು ಸ್ಪಂದನಾ ಅಂತ್ಯಕ್ರಿಯೆ ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿತು.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article