‘ಗನ್ಸ್ ಅಂಡ್ ರೋಸಸ್’ ಚಿತ್ರಕ್ಕಾಗಿ ಹಾಡಿದ ವಿಜಯ್ ಪ್ರಕಾಶ್

Public TV
1 Min Read
Vijaya prakash

ದ್ಭುತ ಕಂಠದಿಂದಾಗಿ ವಿಶ್ವದಾದ್ಯಂತ ಜನಪ್ರಿಯರಾಗಿರುವ ಗಾಯಕ ವಿಜಯ್ ಪ್ರಕಾಶ್ (Vijay Prakash),  ‘ಗನ್ಸ್ ಆ್ಯಂಡ್ ರೋಸಸ್’ (Guns and Roses) ಚಿತ್ರದ ಹಾಡೊಂದನ್ನು (Song) ‌ಹಾಡಿದ್ದಾರೆ. ಶರಣ್ ಕುಮಾರ್ ಬರೆದಿರುವ ‘108 ಗೆ ಫೋನ್ ಮಾಡೊ ಶಿಷ್ಯ. ಸಾವು ಬದುಕಿನ ಮಧ್ಯೆ ಹೋರಾಡೊ ವಿಷ್ಯ’ ಎಂಬ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದು, ಇತ್ತೀಚೆಗೆ ಹೊಸಕೆರೆಹಳ್ಳಿಯ ದ್ವಾರ ಸ್ಟುಡಿಯೋದಲ್ಲಿ ಧ್ವನಿಮುದ್ರವಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

Guns and Roses

ರಾಜಕೀಯದಲ್ಲಿ ಸಕ್ರಿಯರಾಗಿರುವ ಉದ್ಯಮಿ ಹೆಚ್. ಆರ್. ನಟರಾಜ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಹೆಚ್.ಎಸ್. ಶ್ರೀನಿವಾಸ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಶರತ್. ಎಸ್ ಅವರದು. ಶಶಿಕುಮಾರ್ ಸಂಗೀತ ನಿರ್ದೇಶನ, ಆರ್ ಜನಾರ್ದನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಕಥೆಗಾರರಾದ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಯಶ್ಚಿಕ ನಿಷ್ಕಲ. ಶೋಭ್ ರಾಜ್, ಅವಿನಾಶ್, ಅಶ್ವಥ್ ನೀನಾಸಂ, ಹರೀಶ್, ಜೀವನ್ ರಿಚಿ, ಅರುಣಾ ಬಾಲರಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ‌.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article