ಶಿವಮೊಗ್ಗ: ನಗರದಲ್ಲಿ ಕೆಲದಿನಗಳ ಹಿಂದೆ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು (Aquest) ಸ್ಥಳ ಮಹಜರ್ ನಡೆಸಲು ಪೊಲೀಸರು (Police) ಕರೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿ ಜಬೀ ಎಂಬಾತ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ. ತಮ್ಮ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹೊಡೆದ ಘಟನೆ ಶಿವಮೊಗ್ಗದ (Shivamogga) ಹೊರವಲಯದಲ್ಲಿ ನಡೆದಿದೆ.
Advertisement
ವೆಂಕಟೇಶನಗರದಲ್ಲಿ ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆ ಉದ್ಯೋಗಿ ವಿಜಯ್ (37) ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜಬೀ, ದರ್ಶನ್ ಹಾಗೂ ಕಾರ್ತಿಕ್ ಎಂಬ ಮೂರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಇದನ್ನೂ ಓದಿ: ಸಚಿವ ಸೋಮಣ್ಣ ಕಪಾಳಮೋಕ್ಷ ಕೇಸ್ – ಸಂಘಟನೆಗಳು ಕಿರುಕುಳ ನೀಡ್ತಿವೆ ಎಂದು ಪೊಲೀಸರಿಗೆ ಮಹಿಳೆ ದೂರು
Advertisement
Advertisement
ವಿಜಯ್ ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ಹಂತಕರು ನಗರದ ಹೊರ ವಲಯದ ಹರ್ಷದ ಫರ್ನ್ ಹೋಟೆಲ್ ಸಮೀಪ ಪೊದೆಯೊಂದರಲ್ಲಿ ಅವಿತಿಟ್ಟಿದ್ದರು. ಮಾರಕಾಸ್ತ್ರ ವಶಕ್ಕೆ ಪಡೆದು, ಸ್ಥಳ ಮಹಜರು ನಡೆಸಲು ಪೊಲೀಸರು ಪ್ರಮುಖ ಆರೋಪಿ ಜಬೀಯನ್ನು ಸ್ಥಳಕ್ಕೆ ಕರೆದೊಯ್ದಿದ್ದರು. ಈ ವೇಳೆ ಜಬೀ ಪೊಲೀಸ್ ಕಾನ್ಸ್‌ಟೇಬಲ್ ರೋಷನ್ ಎಂಬುವರ ಮೇಲೆ ಹಲ್ಲೆಗೆ ಯತ್ನಿಸಿದ. ಅದೃಷ್ಟವಶಾತ್ ರೋಷನ್ ತಪ್ಪಿಸಿಕೊಂಡಿದ್ದಾರೆ. ಆದರೂ ಅವರಿಗೂ ಸಣ್ಣಪುಟ್ಟ ಗಾಯವಾಗಿದೆ. ಈ ವೇಳೆ ಕುಂಸಿ ಠಾಣೆ ಇನ್ಸ್‌ಪೆಕ್ಟರ್ ಹರೀಶ್ ಪಟೇಲ್, ಆರೋಪಿ ಜಬೀ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಕೆಲವು ಮುಸ್ಲಿಮರು ಶಿವಮೊಗ್ಗವನ್ನು ಹಾಳು ಮಾಡ್ತಿದ್ದಾರೆ: ಕೆ.ಎಸ್ ಈಶ್ವರಪ್ಪ
Advertisement
ಗಾಯಗೊಂಡಿರುವ ಜಬೀಯನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪೊಲೀಸ್ ಕಾನ್ಸ್‌ಟೇಬಲ್ ರೋಷನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.