ನವದೆಹಲಿ: ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವವರೆಗೆ ಇನ್ನು ಮುಂದೆ ನಾವು ಕಾಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಖಡಕ್ ಆಗಿ ಹೇಳಿದೆ.
ಸುಪ್ರೀಂಕೋರ್ಟ್‍ನಲ್ಲಿ ಮಂಗಳವಾರ ವಿಜಯ್ ಮಲ್ಯ ನ್ಯಾಯಾಂಗ ನಿಂದನ ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ಮಲ್ಯ ಅವರಿಗಿದ್ದ ಎಲ್ಲ ಮೇಲ್ಮನವಿ ಸಲ್ಲಿಸುವ ಎಲ್ಲ ಮಾರ್ಗಗಳು ಈಗಾಗಲೇ ಮುಗಿದಿದೆ. ಆದರೂ ಕೆಲವು ‘ಗೌಪ್ಯ ಪ್ರಕ್ರಿಯೆಗಳು’ ಬಾಕಿ ಉಳಿದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತು. ಇದನ್ನೂ ಓದಿ: ಇಂದು 745 ಜನರು ಡಿಸ್ಚಾರ್ಜ್- 8 ಸಾವು
Advertisement
Advertisement
ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವವರೆಗೆ ನಾವು ಇನ್ನು ಮುಂದೆ ಕಾಯಲು ಸಾಧ್ಯವಿಲ್ಲ, ಎಂದು ಹೇಳಿದ ನ್ಯಾಯಾಲಯ ಮುಂದಿನ ಕೊನೆಯ ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಲಾಗುವುದು. ಶಿಕ್ಷೆ ವಿಧಿಸಲು ನಾವು ಸಿದ್ಧ ಎಂದು ತಿಳಿಸಿತು. ಈ ವೇಳೆ ಮಲ್ಯ ಹಾಜರಾಗದೇ ಇದ್ದರೂ ವಿಚಾರಣೆ ನಡೆಯುತ್ತದೆ ಎಂದು ಹೇಳಿದೆ.
Advertisement
Advertisement
ಡಿಯಾಗೋ ಒಪ್ಪಂದದ 40 ದಶಲಕ್ಷ ಡಾಲರ್‍ಗಳನ್ನು ತನ್ನ ಮಕ್ಕಳ ವಿದೇಶಿ ಖಾತೆಗಳಿಗೆ ವರ್ಗಾಯಿಸಿದ್ದಕ್ಕಾಗಿ ಮತ್ತು ನಿಖರವಾದ ಆಸ್ತಿ ವಿವರಗಳನ್ನು ನೀಡಲು ವಿಫಲವಾಗಿದ್ದಕ್ಕೆ ಮಲ್ಯ ಅವರನ್ನು ನ್ಯಾಯಾಂಗ ನಿಂದನೆಯ ದೋಷಿ ಎಂದು ಕೋರ್ಟ್ ಘೋಷಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಮಲ್ಯ ಅವರ ಮರುಪರಿಶೀಲನಾ ಅರ್ಜಿಯನ್ನೂ ಸಹ ವಜಾಗೊಳಿಸಲಾಗಿದೆ. ಇದನ್ನೂ ಓದಿ: 2 ಡೋಸ್ ಪಡೆದವರಿಗೆ ಚಿಕಿತ್ಸೆ – ಸರ್ಕಾರಿ ಸೌಲಭ್ಯ ಕಡಿತಗೊಳಿಸಿ
2017ರಲ್ಲಿ ಸುಪ್ರೀಂ ಕೋರ್ಟ್ ಮಲ್ಯ ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ಬ್ಯಾಂಕ್‍ಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸಿದ ನಂತರ ಮಲ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಹಸ್ತಾಂತರ ಕಾನೂನು ಹೋರಾಟದಲ್ಲಿ ಸೋತ ಬಳಿಕವೂ ಇನ್ನೂ ವಿಜಯ್ ಮಲ್ಯ ಹೇಗೆ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ ಎಂದು ಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.