Connect with us

Bengaluru City

ಮದ್ಯದ ದೊರೆಗೆ ಬೆಂಗ್ಳೂರಿನಲ್ಲಿ ಭವ್ಯ ಬಂಗಲೆ- ಬರೋಬ್ಬರಿ 100 ಕೋಟಿಯಲ್ಲಿ ನಿರ್ಮಾಣ

Published

on

ಬೆಂಗಳೂರು: ಕಿಂಗ್ ಫಿಶರ್ ವಿಮಾನ ಏರಿ, ಬಿಯರ್ ಸವಿಯುತ್ತಾ, ತ್ರಿಲೋಕ ಸುಂದರಿಯರನ್ನು ಪಕ್ಕದಲ್ಲಿಟ್ಟುಕೊಂಡು ಬೀಚ್‍ಗಳಲ್ಲಿ ಮಜಾ ಮಾಡಿ ಬ್ಯಾಂಕ್‍ನಲ್ಲಿ ಸಾಲ ಪಡೆದುಕೊಂಡು ಓಡಿ ಹೋದ ಮಲ್ಯ ಅವರ ರಾಯಲ್ ಲೈಫ್‍ಗೇನು ಕೊಕ್ಕೆ ಬಿದ್ದಿಲ್ಲ. ಬೆಂಗಳೂರಿನ ದಿ ಮೋಸ್ಟ್ ಕಾಸ್ಟ್ಲಿಯೆಸ್ಟ್ ಏರಿಯಾದಲ್ಲಿ ಮಲ್ಯ ಕನಸಿನ ಅರಮನೆಗೆ ಅದ್ಧೂರಿ ಜೀವ ಬಂದಿದೆ.

ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ಲಂಡನ್‍ಗೆ ಪರಾರಿಯಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯ ಭಾರತಕ್ಕೆ ಗಡಿಪಾರು ಮಾಡಲು ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಅನುಮತಿ ನೀಡಿತ್ತು. ಆದರೆ ಈಗ ಮಲ್ಯಗಾಗಿ ಬೆಂಗಳೂರಿನಲ್ಲಿ ಅರಮನೆಯಂತಹ ಮನೆಯೊಂದು ನಿರ್ಮಾಣವಾಗುತ್ತಿದೆ. ಭೂಮಿಯ ಅತಿ ಎತ್ತರದಲ್ಲಿರುವ ಬಂಗಲೆ ಇದಾಗಿದ್ದು, ಮಲ್ಯನ ಎರಡು ಫ್ಲೋರ್ ನ ಮನೆಯಿಂದ ಏಣಿ ಇಟ್ಟರೆ ಆಕಾಶ ಸಿಗುತ್ತೆ ಅನ್ನುವ ಫೀಲ್ ಹುಟ್ಟಿಸುವಷ್ಟು ಎತ್ತರದಲ್ಲಿದೆ. 400 ಅಡಿ ಕಿಂಗ್ ಫಿಶರ್ ಟವರ್ ನಲ್ಲಿ ರೂಫ್ ಟಾಪ್‍ನಲ್ಲಿ ಅಮೆರಿಕ ಹಾಗೂ ಲಂಡನ್ ಮೇಯರ್ ಮನೆಯನ್ನು ಹೋಲುವ ವೈಟ್ ಹೌಸ್ ಮಲ್ಯ ಸಾಹೇಬ್ರಿಗಾಗಿ ನಿರ್ಮಾಣವಾಗುತ್ತದೆ. ಇದನ್ನೂ ಓದಿ:  ಬ್ರಿಟನ್‍ನಿಂದ ವಿಜಯ್ ಮಲ್ಯ ಭಾರತಕ್ಕೆ ಗಡಿಪಾರು

100 ಕೋಟಿ ವೆಚ್ಚದಲ್ಲಿ ಮನೆ:
ಬೆಂಗಳೂರಿನ ಟಾಪ್ ಅಪಾರ್ಟ್ ಮೆಂಟ್ ಇದಾಗಿದ್ದು, ಅತ್ಯಂತ ದುಬಾರಿ ವೆಚ್ಚದ್ದಾಗಿದೆ. ಈ ಅಪಾರ್ಟ್ ಮೆಂಟ್ ಅನ್ನು ಮಲ್ಯ ಒಡೆತನದ ಯುಬಿ ಗ್ರೂಫ್ ಹಾಗೂ ಪ್ರೆಸ್ಟೀಜ್ ಪಾಲುದಾರರಾಗಿ ಕಟ್ಟಿದೆ. 82 ಪ್ಲ್ಯಾಟ್ ಇದೆ. ಪ್ಲೋರ್ ರೂಪ್ ಟಾಫ್‍ನಲ್ಲಿ ಪೆಂಟ್ ಹೌಸ್‍ನಲ್ಲಿ ಮಲ್ಯನ ರಾಜ ದರ್ಬಾರ್ ನಡೆಯಲಿದೆ. ಅಮೆರಿಕದ ವೈಟ್ ಹೌಸ್ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಈ ಭವ್ಯ ಪ್ಲ್ಯಾಟ್ ಮಲ್ಯಗೆ ಸೇರಿದ್ದಾಗಿದೆ.

ಮಲ್ಯನ ಭವ್ಯ ಅರಮನೆ 400 ಅಡಿ ಎತ್ತರದಲ್ಲಿದ್ದು, 34 ಹಾಗೂ 35ನೇ ಲೆವಲ್‍ನಲ್ಲಿ ಮಲ್ಯ ಮನೆಯಿದೆ. ಮನೆಯ ಟಾಪ್‍ನಲ್ಲಿ ಹೆಲಿಪ್ಯಾಡ್, ಜೊತೆಗೆ ದೊಡ್ಡ ಸ್ವಿಮ್ಮಿಂಗ್ ಪೂಲ್ ಮತ್ತು ದೊಡ್ಡದಾದ ಬಾರ್ ಹೌಸ್ ಕೂಡ ಇದೆ. ಜಗತ್ತಿನ ದುಬಾರಿ ಎಣ್ಣೆಗಳು ಇಲ್ಲಿ ಸಿಗಲಿದೆ. ಬರೋಬ್ಬರಿ ನೂರು ಕೋಟಿಯಷ್ಟು ವೆಚ್ಚದಲ್ಲಿ ಈ ವೈಟ್ ಹೌಸ್ ನಿರ್ಮಾಣವಾಗುತ್ತಿದೆ. ಆದರೆ ಮಾರ್ಕೆಟ್ ನ ಮೌಲ್ಯ 500 ಕೋಟಿ ಎಂದು ಹೇಳಲಾಗುತ್ತಿದೆ.

ಈ ಅಪಾರ್ಟ್ ಮೆಂಟ್ ಎರಡು ಸಾವಿರ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣಗಲಿದ್ದು, ಪ್ರತಿ ರೂಂಗೂ ಅದ್ಭುತ ಇಂಟಿರಿಯರ್ ವರ್ಕ್, ಜಗತ್ತಿನ ದುಬಾರಿ ಸೋಫಾಸೆಟ್, ಬಂಗಾರದ ಬಣ್ಣದಂತೆ ಹೊಳೆಯುವ ಬೆಡ್‍ಗಳು. ಇಟಲಿಯನ್ ಮಾರ್ಬಲ್ ಸ್ಟೋನ್, ಕೇನ್ಯನ್ ಹಾರ್ಡ್ ವುಡ್ ಮಾರ್ಬಲ್, ಗೋಲ್ಡನ್ ಬಾತ್ ರೂಂ ಟೈಲ್ಸ್, ಅಲ್ಲದೇ ಕಣ್ಣು ಕೋರೈಸುವ ಮಂದ ಬೆಳಕಲ್ಲಿ ಪಬ್ ಕೂಡ ಇದ್ದು, ಇದು ಮಲ್ಯ ಅರಮನೆಯ ಸ್ಪೆಷಾಲಿಟಿಯಾಗಿದೆ.

ಈ ಮನೆಯಲ್ಲಿ ಎರಡು ಲಿಫ್ಟ್ ಇದ್ದು, ಒಂದು ವಿಜಯಮಲ್ಯಗಷ್ಟೇ ಮೀಸಲು. ಇನ್ನೊಂದು ಗೆಸ್ಟ್ ಗಳಿಗೆ ಮೀಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಇರುವ ಈ ಲಿಫ್ಟ್ ಮಲ್ಯ ಪಿಂಗರ್ ಫ್ರಿಂಟ್ ಇಲ್ಲದೇ ತೆರೆಯಲ್ಲ. ಅಷ್ಟೊಂದು ಭದ್ರತೆಯಿಂದ ಕೂಡಿದೆ. ಸದ್ಯಕ್ಕೆ ಮಲ್ಯ ಅರಮನೆಗೆ ಫೈನಲ್ ಟಚ್ ಸಿಕ್ಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *