ಲಂಡನ್: ಮದ್ಯ ದೊರೆ ವಿಜಯ್ ಮಲ್ಯ ಇಂದು ಬೆಳಿಗ್ಗೆ ಲಂಡನ್‍ನಲ್ಲಿ ಬಂಧನವಾದ ಮೂರೇ ಗಂಟೆಗಳಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ.
ಗಡೀಪಾರು ವಾರೆಂಟ್ ಮೇಲೆ ಲಂಡನ್‍ನ ಕಾಲಮಾನದ ಪ್ರಕಾರ ಇಂದು ಬೆಳಿಗ್ಗೆ 9.30ರ ವೇಳೆಗೆ ಮಲ್ಯರನ್ನು ಬಂಧಿಸಲಾಗಿತ್ತು. ನಂತರ ಲಂಡನ್‍ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಹಾಜರುಪಡಿಸಲಾಗಿದ್ದು, ಮಲ್ಯಗೆ ಜಾಮೀನು ಸಿಕ್ಕಿದೆ.
Advertisement
ಜಾಮೀನು ಸಿಕ್ಕ ಬಳಿಕ ಮಲ್ಯ ಟ್ವೀಟ್ ಮಾಡಿದ್ದು, ಇದು ಎಂದಿನ ಭಾರತೀಯ ಮಾಧ್ಯಮಗಳ ಹೈಪ್. ಅಂದುಕೊಂಡಂತೆ ಕೋರ್ಟ್‍ನಲ್ಲಿ ಗಡೀಪಾರು ವಿಚಾರಣೆ ಇಂದು ಆರಂಭವಾಗಿದೆ ಎಂದು ಹೇಳಿದ್ದಾರೆ.
Advertisement
Usual Indian media hype. Extradition hearing in Court started today as expected.
— Vijay Mallya (@TheVijayMallya) April 18, 2017
Advertisement
ಮಲ್ಯ ಬಂಧನದ ಬಗ್ಗೆ ಬ್ರಿಟಿಷ್ ಅಧಿಕಾರಿಗಳು ಸಿಬಿಐಗೆ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ಲಂಡನ್‍ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಗಡೀಪಾರು ಮಾಡ್ತಾರಾ?: ಇಂಗ್ಲೆಂಡಿನ ಮ್ಯೂಚುವಲ್ ಲೀಗಲ್ ಅಸಿಸ್ಟೆನ್ಸ್ ಟ್ರೀಟಿಯ ಪ್ರಕಾರ ಮಲ್ಯರನ್ನ ಭಾರತಕ್ಕೆ ಗಡೀಪಾರು ಮಡಲಾಗುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಭಾರತಕ್ಕೆ ಕರೆತಂದ ನಂತರ ಪ್ರವೆಂನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್ ಅಡಿ ಮಲ್ಯ ವಿಚಾರಣೆ ನಡೆಯಲಿದೆ.
ವಿಜಯ್ ಮಲ್ಯ 17 ಬ್ಯಾಂಕ್‍ಗಳ ಒಕ್ಕೂಟಕ್ಕೆ ಸುಮಾರು 9 ಸಾವಿರ ಕೋಟಿ ರೂ. ಸಾಲ ಹಿಂದಿರುಗಿಸಬೇಕಿದ್ದು, ಕಳೆದ ವರ್ಷ ಮಾರ್ಚ್ 2ರಂದು ಭಾರತ ತೊರೆದು ಲಂಡನ್‍ಗೆ ಹೋಗಿ ನೆಲೆಸಿದ್ದರು.